ಭಾರತದಲ್ಲಿ ವಾಯುಮಾಲಿನ್ಯದಿಂದ ಪ್ರತಿ ನಿಮಿಷ ಇಬ್ಬರು ಬಲಿ
Update: 2017-02-19 14:01 IST
ಹೊಸದಿಲ್ಲಿ, ಫೆ.19: ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ ಪ್ರತಿ ನಿಮಿಷ ಇಬ್ಬರು ಭಾರತೀಯರು ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ಅಧ್ಯಯನದಿಂದ ಸಾಬೀತಾಗಿದೆ.
ಮೆಡಿಕಲ್ ಜರ್ನಲ್ ದಿ ಲಾನ್ಸೆಟ್ ಪ್ರಕಾರ, ವಾಯು ಮಾಲಿನ್ಯದಿಂದಾಗಿ ಪ್ರತಿವರ್ಷ ಮಿಲಿಯನ್‌ಗೂ ಅಧಿಕ ಭಾರತೀಯರು ಸಾವನ್ನಪ್ಪುತ್ತಿದ್ದಾರೆ. ವಿಶ್ವದ ಅತ್ಯಂತ ಮಾಲಿನ್ಯ ನಗರಗಳು ಭಾರತದಲ್ಲಿವೆ ಎಂದು ಹೇಳಿದೆ.
ಉತ್ತರಭಾರತದಲ್ಲಿ ಕಂಡುಬರುವ ಭಾರೀ ಹೊಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದು, ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಇಬ್ಬರು ಭಾರತೀಯರು ಸಾಯುತ್ತಿದ್ದಾರೆ ಎಂದು ಲಾನ್ಸೆಟ್ ಪ್ರಕಟಿಸಿರುವ ವರದಿಯಲ್ಲಿ ತಿಳಿದುಬಂದಿದೆ.
ಇತ್ತೀಚೆಗೆ 48 ಖ್ಯಾತ ವಿಜ್ಞಾನಿಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಪಾಟ್ನಾ ಹಾಗೂ ಹೊಸದಿಲ್ಲಿ ವಿಶ್ವದ ಅತ್ಯಂತ ಮಾಲಿನ್ಯಯುತ ನಗರಗಳಾಗಿವೆ. ಪರಿಸರ ಮಾಲಿನ್ಯದಿಂದಾಗಿ ಹೃದಯಕ್ಕೆ ಹೆಚ್ಚು ಹಾನಿಯಾಗುತ್ತದೆ ಎಂದು ಹೇಳಿದೆ.