×
Ad

ಬಾಹ್ಯಾಕಾಶ ನಿಲ್ದಾಣದಲ್ಲಿ ಕ್ಯಾಬೇಜ್ ಬೆಳೆದ ಗಗನಯಾತ್ರಿಗಳು !

Update: 2017-02-19 21:01 IST

ಲಂಡನ್,ಫೆ.19: ಮಂಗಳನ ಅಂಗಳದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯತ್ನದಲ್ಲ್ಲಿ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿದ್ದಾರೆ. ಹೌದು. ಅಂತಾರಾಷ್ಟ್ರೀಯ ಬಾಹ್ಯಾಕಾಶಾ ನಿಲ್ದಾಣ(ಐಎಸ್‌ಎಸ್)ದಲ್ಲಿ ವಾಸವಾಗಿರುವ ಗಗನಯಾತ್ರಿಗಳು, ಅಲ್ಲಿ ಚೀನಿ ತಳಿಯ ಕ್ಯಾಬೇಜೊಂದನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ.

ಕಳೆದ ಒಂದೆರಡು ವರ್ಷಗಳಲ್ಲಿ ಐಎಸ್‌ಎಸ್‌ನಲ್ಲಿ ಬಾಹ್ಯಾಕಾಶಯಾನಿಗಳು ತಮ್ಮ ಆಹಾರವನ್ನು ತಾವೇ ಬೆಳೆದಿರುವುದು ಇದು ಎರಡನೆ ಸಲವಾಗಿದೆ. 2015ರ ಆಗಸ್ಟ್‌ನಲ್ಲಿ ಗನಯಾನಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ‘ರೆಡ್ ರೊಮಾನಿ ಲೆಟ್ಯೂಸ್’ ಎಂಬ ತರಕಾರಿ ಸೊಪ್ಪೊಂದನ್ನು ಬೆಳೆಯುವಲ್ಲಿ ಸಫಲರಾಗಿದ್ದರು.

ಬಾಹ್ಯಾಕಾಶದಲ್ಲಿ ತರಕಾರಿಗಳನ್ನು ಬೆಳೆಯುವುದು ಹಾಗೂ ಅವು ಎಷ್ಟರಮಟ್ಟಿಗೆ ಪೌಷ್ಟಿಕವಾಗಿರುತ್ತವೆ ಎಂಬ ಬಗ್ಗೆಯೂ ಸಮೀಕ್ಷೆಯನ್ನು ನಡೆಸಲಾಗಿದೆಯೆಂದು ನಾಸಾ ವಿಜ್ಞಾನಿ ಗಿಯೊ ಮಾಸ್ಸಾ ತಿಳಿಸಿದ್ದಾರೆ.

ಗಗನಯಾನಿಗಳು ತಾವು ಬೆಳೆದ ಬೆಳೆಯ ಅರ್ಧದಷ್ಟನ್ನು ಬಾಹ್ಯಾಕಾಶದಲ್ಲಿ ಸವಿಯಲಿದ್ದಾರೆ. ಉಳಿದರ್ಧವನ್ನು ನಾಸಾದ ಸಂಶೋಧನೆಗಾಗಿ ಭೂಮಿಗೆ ಕಳುಹಿಸಿಕೊಡಲಿದ್ದಾರೆ. ಭವಿಷ್ಯದಲ್ಲಿ ಮಂಗಳಗ್ರಹದಲ್ಲಿ ಸಸ್ಯಗಳನ್ನು ಬೆಳೆಸಲು, ಈ ಸಂಶೋಧನೆಯಿಂದ ಭಾರೀ ಪ್ರಯೋಜನವಾಗಲಿದೆಯೆಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News