×
Ad

ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ : ಹೋಮ್‌ವರ್ಕ್ ಪೂರ್ಣಗೊಳಿಸದ್ದಕ್ಕೆ ಶಿಕ್ಷೆ...!

Update: 2017-02-19 21:09 IST

ಜೈಪುರ,ಫೆ.19: ಹೋಮ್‌ವರ್ಕ್ ಪೂಣಗೊಳಿಸದ್ದಕ್ಕಾಗಿ ಖಾಸಗಿ ಶಾಲೆಯೊಂದರ ಶಿಕ್ಷಕಿಯೋರ್ವಳು 14 ಹರೆಯದ ಏಳನೇ ತರಗತಿಯ ವಿದ್ಯಾರ್ಥಿನಿಯ ಬಟ್ಟೆಗಳನ್ನು ಬಲವಂತದಿಂದ ಬಿಚ್ಚಿಸಿದ ಹೇಯ ಘಟನೆ ರಾಜಸಮಂದ್ ಜಿಲ್ಲೆಯ ನಾಥದ್ವಾರಾ ಪಟ್ಟಣದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಅದೇ ಶಾಲೆಯಲ್ಲಿ ವಿದ್ಯಾರ್ಥಿಯಾಗಿರುವ ಬಾಲಕಿಯ ಸೋದರ ಹೆತ್ತವರಿಗೆ ವಿಷಯವನ್ನು ತಿಳಿಸಿದ ಬಳಿಕ ಅವರು ಶಿಕ್ಷಕಿಯ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆರೋಪಿ ಶಿಕ್ಷಕಿಯನ್ನೂ ಇನ್ನಷ್ಟೇ ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News