ಜಪಾನ್ ಬಾಲಕನ ವಿರುದ್ಧ ಶರತ್‌ಗೆ ಸೋಲು
Update: 2017-02-19 23:05 IST
ಹೊಸದಿಲ್ಲಿ, ಫೆ.19: ಐಟಿಟಿಎಫ್ ವರ್ಲ್ಡ್ ಟೂರ್ ಇಂಡಿಯಾ ಓಪನ್‌ನಲ್ಲಿ ಭಾರತದ ಅಚಂತಾ ಶರತ್ ಕಮಲ್ ಜಪಾನ್‌ನ 13ರ ಬಾಲಕ ಟೊಮೊಕಾಝು ಹೊರಿಮೊಟೊ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ.
ಇಲ್ಲಿನ ತ್ಯಾಗರಾಜ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಹೊರಿಮೊಟೊ ವಿರುದ್ಧ ಶರತ್ ಅವರು 11-7, 5-11, 11-7, 11-13, 11-9, 11-9 ಅಂತರದಿಂದ ಸೋತಿದ್ದಾರೆ.
ಹೊರಿಮೊಟೊ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.5ನೆ ಆಟಗಾರ ಡಿಮಿಟ್ರಿಜ್ ಒಟ್ಚಾರೊವ್‌ರನ್ನು ಎದುರಿಸಲಿದ್ದಾರೆ.