ಸಾಲ ಮರುಪಾವತಿಸದ 67 ಲಕ್ಷ ಮಂದಿಗೆ ಚೀನಾದಲ್ಲಿ ನಿಷೇಧ !
ಬೀಜಿಂಗ್,ಫೆ. 20: ಕೋಟ್ಯಂತರ ರೂಪಾಯಿ ಸಾಲ ಪಡೆದು ಬ್ಯಾಂಕಿಗೆ ವಂಚಿಸಿದ ವಿಜಯಮಲ್ಯರನ್ನು ಬಂಧಿಸಬೇಕೆ ಬೇಡವೇ ಎಂದು ನಮ್ಮ ನಾಡಿನವ್ಯವಸ್ಥೆ ಅನುಮಾನಪಡುತ್ತಿದ್ದರೆ, ಚೀನಾಾದಲ್ಲಿ ಸಾಲ ಬಾಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾಲ ಮರುಪಾತಿಸದ 67.3 ಲಕ್ಷ ಮಂದಿ ಪ್ರಜೆಗಳಿಗೆ ಚೀನಾ ಅತ್ತಿತ್ತ ಪ್ರಯಾಣಿಸಲು ಕೂಡಾ ಆಗದಂತೆ ನಿಷೇಧ ಹೇರಿದೆ.ಅವರನ್ನು ಪೀಪಲ್ಸ್ ಸುಪ್ರೀಂಕೋರ್ಟು ಕಪ್ಪುಪಟ್ಟಿಗೆ ಸೇರಿಸಿದೆ. ಆದ್ದರಿಂದ ಈ ಸಾಲಗಾರರಿಗೆ ಬೇರೆ ಸ್ಥಳಗಳಿಗೆ ಪ್ರಯಾಣಿಸಲು, ಇತರ ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಕ್ರೆಡಿಟ್‌ಕಾರ್ಡ್ ಪಡೆಯಲು ಸಾಧ್ಯವಿಲ್ಲ.
ಇವರ ಪಾಸ್‌ಪೋರ್ಟ್,ಐಡಿ ಕಾರ್ಡ್ ವಿವರಗಳನ್ನು ದೇಶದ ವಿಮಾನ ಕಂಪೆನಿಗಳಿಗೆ, ರೈಲ್ವೆ ಕಂಪೆನಿಗಳಿಗೆ ನೀಡಲಾಗಿದೆ. ನಿಷೇಧ ಹೇರಲಾದ ಪ್ರಕಾರ 61.5 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣಿಸುವಂತಿಲ್ಲ. 22 ಲಕ್ಷ ಮಂದಿಗೆ ಅತಿವೇಗದ ರೈಲಿನಲ್ಲಿ ಪ್ರಯಾಣಿಸದಂತೆ ತಡೆಯಲಾಗಿದೆ. 71,000 ಮಂದಿಯನ್ನುಕಾರ್ಪೊರೇಟ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡದಂತೆ ನಿಷೇಧಿಸಲಾಗಿದೆ. ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಚೈನೀಸ್ ಕಮ್ಯೂನಿಸ್ಟ್ ಪಾರ್ಟಿ ಸದಸ್ಯರು ಕೂಡಾ ನಿಷೇಧ ಹೇರಲ್ಪಟ್ಟವರಲ್ಲಿದ್ದಾರೆಂದು ವರದಿ ತಿಳಿಸಿದೆ.