ಕಾಸರಗೋಡು: ಹೈನುಗಾರಿಕೆಯಲ್ಲೊಂದು ಯಶೋಗಾಥೆ

Update: 2017-02-20 18:31 GMT

ಕಾಸರಗೋಡು, ೆ.20: ಪ್ರಸಕ್ತ ದಿನಗಳಲ್ಲಿ ಹೈನುಗಾರಿಕೆಯಿಂದ ನಷ್ಟವಾಗುತ್ತಿದೆ ಎನ್ನುವ ಮನೋಭಾವದಿಂದ ರೈತರು ಹೈನುಗಾರಿಕೆಯನ್ನೆ ಕೈಬಿಟ್ಟಿದ್ದು, ಕೃಷಿ ಚಟುವಟಿಕೆಗಳಿಂದಲೂ ದೂರ ಸರಿ ಯುತ್ತಿದ್ದಾರೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಕಾಸರಗೋಡಿನಲ್ಲೊಬ್ಬ ರೈತ ಕೃಷಿಯ ಜತೆಗೆ ಹೈನುಗಾರಿಕೆ ನಡೆಸಿ ಯಶಸ್ವಿಯಾಗಿದ್ದಾರೆ. ಒಂದು ಕಾಲದಲ್ಲಿ ಖಾಸಗಿ ಬಸ್ ಮಾಲಕರಾಗಿದ್ದ ಕಾಸರಗೋಡು ಜಿಲ್ಲೆಯ ಬಾಡೂರು ಬೆಳ್ಮರದ ಕೃಷಿಕ ಮುಹಮ್ಮದ್, ಇವುಗಳನ್ನು ಮೀರಿನಿಂತಿದ್ದು, ಹೈನುಗಾರಿಕೆ ಯಲ್ಲಿ ಯಶಸ್ವಿಯಾಗಿದ್ದಾರೆ.

 ಹೈನುಗಾರಿಕೆ ನಡೆಸಲು ಸಾಕಷ್ಟು ನೀರಿಲ್ಲ. ಗೋವುಗಳಿಗೆ ಮೇವಿಲ್ಲ ಹೀಗೆ ಹತ್ತು ಹಲವು ಕಾರಣಗಳಿಂದ ರೈತರು ಹೈನುಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ಆದರೆ ಮುಹಮ್ಮದ್ ಕಳೆದ 10 ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಿದ್ದು, 25ಕ್ಕೂ ಅಕ ಗೋವುಗಳನ್ನು ಅವರು ಹೊಂದಿದ್ದಾರೆ. ಪ್ರತೀ ದಿನ 250ಲೀ.ಗೂ ಅಕ ಹಾಲನ್ನು ಮುಹಮ್ಮದ್ ಮಾರಾಟ ಮಾಡುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ಅಲ್ಲದೆ ಅವರು ಹೈನುಗಾರಿಕೆಯನ್ನು ಕೇವಲ ಲಾಭದಾಯಕವಾಗಿ ನಡೆಸದೆ, ಹವ್ಯಾಸ ವನ್ನಾಗಿಸಿದ್ದಾರೆ. ವಿವಿಧ ತಳಿಯ ಗೋವು ಗಳನ್ನು ಕೃಷಿಕ ಮುಹಮ್ಮದ್ ಹೊಂದಿದ್ದಾರೆ.

ಜೆರ್ಸಿ, ರೆಡ್ ಸಿದ್ಧಿ, ಸಾಯವಾಲ್, ಗಿರ್, ಎಚ್‌ಎ್ ಸೇರಿದಂತೆ ಹಲವು ತಳಿಯ ಜಾನುವಾರುಗಳು ಇವರಲ್ಲಿವೆ. ಏಕಾಏಕಿ ಗೋ ಸಾಕಣೆಯಲ್ಲಿ ಆಸಕ್ತಿ ಗಳಿಸಿಕೊಂಡ ಮಹಮ್ಮದ್ ಹೈನು ಗಾರಿಕೆಯನ್ನು ಆರಂಭಿಸಿದ್ದರು. ಅವರ ಗೋ ಪ್ರೀತಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.

ಹೈನುಗಾರಿಕೆಗೆ ತಿಂಗಳಿಗೆ ಕನಿಷ್ಠ ಒಂದೂವರೆ ಲಕ್ಷದಷ್ಟು ವೆಚ್ಚ ಬೀಳುತ್ತಿದ್ದು, ಇವರಿಗೆ ಯಾವುದೇ ರೀತಿಯ ಸಬ್ಸಿಡಿ, ಸವಲತ್ತು ಲಭಿಸುತ್ತಿಲ್ಲ. ಕ್ಷೀರೋತ್ಪಾದಕ ಸೊಸೈಟಿಯಿಂದಲೂ ಯಾವುದೇ ಕಮಿಷನ್ ಅವರಿಗೆ ದೊರೆಯುತ್ತಿಲ್ಲ. ಆದರೂ ಕಳೆದ 10 ವರ್ಷಗಳಿಂದ ಹವ್ಯಾಸವಾಗಿ ಹೈನುಗಾರಿಕೆಯನ್ನು ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳ ಸಾಗಣೆ, ಕಸಾಯಿಖಾನೆಗೆ ಸಾಗಿಸಿ ಸಮಾಜದಲ್ಲಿ ಧ್ವೇಷದ ವಿಷ ಬೀಜ ಬಿತ್ತುವ ದುಷ್ಟ ಶಕ್ತಿಗಳ ನಡುವೆ ಗೋವುಗಳ ಪ್ರಾಣ ಉಳಿಸಿ ಸಾಕಿ ಸಲಹುತ್ತಿರುವ ಮುಹಮ್ಮದ್‌ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

       

 ಹತ್ತು ವರ್ಷಗಳಿಂದ ಜಾನುವಾರುಗಳನ್ನು ಸಾಕುತ್ತಿದ್ದೇನೆ. 35ಕ್ಕೂ ಅಕ ದನಗಳು ನನ್ನಲ್ಲಿವೆ. ದಿನಕ್ಕೆ 250 ಲೀ. ಹಾಲನ್ನು ಕ್ಷೀರೋತ್ಪಾದಕ ಸಂಘದ ಸೊಸೈಟಿಗೆ ಮಾರುತ್ತೇನೆ. ಲೀ.ಗೆ 1ರೂ. ನಂತೆ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳುತ್ತಿದ್ದರೂ ಇದುವರೆಗೆ ನಯಾ ಪೈಸೆ ಲಭಿಸಿಲ್ಲ. ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಅಗತ್ಯ ಬಿದ್ದಲ್ಲಿ ನಾವು ನಮ್ಮ ಖರ್ಚಿನಲ್ಲೇ ವೈದ್ಯರನ್ನು ಕರೆಸಬೇಕಿದೆ. ಸರಕಾರದಿಂದ, ಸಂಘದಿಂದ ಯಾವುದೇ ಸವಲತ್ತುಗಳು ನನಗೆ ಲಭಿಸಿಲ್ಲ ಮುಹಮ್ಮದ್, ಹೈನುಗಾರ.

Writer - ಸ್ಟೀನ್ ಕಯ್ಯರ್

contributor

Editor - ಸ್ಟೀನ್ ಕಯ್ಯರ್

contributor

Similar News