‘ನಾನೂ ಮುಸ್ಲಿಂ’: ನ್ಯೂಯಾರ್ಕ್‌ನಲ್ಲಿ ಸಾವಿರಾರು ಮುಸ್ಲಿಮೇತರರಿಂದ ರ‍್ಯಾಲಿ
ನ್ಯೂಯಾರ್ಕ್,ಫೆ.21:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಯಾಣ ನಿಷೇಧವನ್ನು ಪ್ರತಿಭಟಿಸಿ ದೇಶದ ಪ್ರಮುಖ ನಗರವಾದ ನ್ಯೂಯಾರ್ಕ್‌ನಲ್ಲಿ ಸಾವಿರಾರು ಮಂದಿ ರ‍್ಯಾಲಿ ನಡೆಸಿದ್ದಾರೆ. ‘ನಾನೂ ಮುಸ್ಲಿಂ ಆಗಿದ್ದೇನೆ’ ಎನ್ನುವ ಪ್ಲೇಕಾರ್ಡ್‌ಗಳನ್ನು ಹಿಡಿದು ಬೇರೆ ಬೇರೆ ಧರ್ಮಕ್ಕೆ ಸೇರಿದ ಸಾವಿರಾರು ಮಂದಿ ಮುಸ್ಲಿಮರಿಗೆ ಬೆಂಬಲ ಸೂಚಿಸಿ ರ‍್ಯಾಲಿ ನಡೆಸಿದರು. ಜನಾಂಗೀಯವಾದದ ವಿರುದ್ಧ ಕಾರ್ಯಾಚರಿಸುತ್ತಿರುವ ಫೌಂಡೇಶನ್ ಫಾರ್ ಎತ್ನಿಕ್ ಅಂಡರ್‌ಸ್ಟಾಡಿಂಗ್ ಎನ್ನುವ ಸಂಘಟನೆ ಹಾಗೂ ಇತರ ಕೆಲವು ಸಂಘಟನೆಗಳು ಸೇರಿ ರ‍್ಯಾಲಿಯನ್ನು ಆಯೋಜಿಸಿವೆ.
ಮುಸ್ಲಿಮರಿಗೆ ಹೇರಿದ ಪ್ರಯಾಣ ನಿಷೇಧವನ್ನು ಕೈಬಿಡಿರಿ, ಪೂರ್ವಾಗ್ರಹಗಳನ್ನು ತೊರೆಯಿರಿ ಮುಂತಾದ ಘೋಷಣೆಗೆಳನ್ನು ರ‍್ಯಾಲಿಯಲ್ಲಿ ಭಾಗವಹಿಸಿದವರು ಕೂಗುತ್ತಿದ್ದರು. ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲಾಸಿಯೊ ರ‍್ಯಾಲಿಯನ್ನುದ್ದೇಶಿಸಿ ಮಾತಾಡಿದರು. ಎಲ್ಲ ವಿಶ್ವಾಸಗಳನ್ನು ಮತ್ತು ಧರ್ಮಗಳನ್ನು ಸಂರಕ್ಷಿಸಲು ಅಮೆರಿಕ ಸಂಸ್ಥಾಪನೆಯಾಗಿದೆ ಎಂದು ಅವರು ಹೇಳಿದರು. ಅಮೆರಿಕದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಬೆದರಿಕೆ ಒತ್ತಡಗಳಿಗೆ ಕೊನೆ ಹಾಡಬೇಕು. ಇದಕ್ಕಾಗಿ ಎಲ್ಲರೂ ರಂಗಪ್ರವೇಶಿಸಬೇಕೆಂದು ವಿವಿಧ ಧಾರ್ಮಿಕ ನಾಯಕರು, ಸಾಂಸ್ಕೃತಿಕ ನಾಯಕರು ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.