×
Ad

ಪಾಕಿಸ್ತಾನದ ನ್ಯಾಯಾಲಯದ ಆವರಣದಲ್ಲಿ ಆತ್ಮಾಹುತಿ ದಾಳಿ; 4 ಸಾವು

Update: 2017-02-21 14:38 IST

ಕರಾಚಿ, ಫೆ.21:ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ  ಆತ್ಮಾಹುತಿ ಬಾಂಬ್‌ ದಾಳಿ ನಡೆದ ಪರಿಣಾಮವಾಗಿ ನಾಲ್ವರು ಮೃತಪಟ್ಟ ಘಟನೆ ಪಾಕಿಸ್ತಾನದ ಚಾರ್ ಸಡ್ಡಾ ಎಂಬಲ್ಲಿ ನಡೆದಿದೆ.
ಮೃತಪಟ್ಟವರಲ್ಲಿ ಓರ್ವ ವಕೀಲ ಸೇರಿದ್ದಾರೆ. ಮೂವರು ಬಾಂಬರ್ ಗಳು ಸತ್ತಿದ್ದಾರೆ. ಹದಿನೈದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ತಕ್ಷಣ ಲಭ್ಯವಾಗಿಲ್ಲ.
ಚಾರ್ ಸಡ್ಡಾ ಜಿಲ್ಲೆಯ ತಾಂಗಿ ಎಂಬಲ್ಲಿರುವ ನ್ಯಾಯಾಲಯಕ್ಕೆ ಇಬ್ಬರು ಬಂದೂಕುಧಾರಿಗಳು ನುಗ್ಗಲೆತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಅಷ್ಟರಲ್ಲಿ ಸ್ಫೋಟ ಸಂಭವಿಸಿತು ಎಂದು ತಿಳಿದು ಬಂದಿದೆ.
ನ್ಯಾಯಾಲಯದ ಆವರಣದಲ್ಲಿ ನೂರಾರು ಮಂದಿ ಇದ್ದರು. ಸ್ಫೋಟ ಸಂಭವಿಸಿದ ಬೆನ್ನಲ್ಲೇ  ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ  ಓಡಿದರು. ಪಾಕಿಸ್ತಾನ ಉಗ್ರ ಸಂಘಟನೆಯೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಕಳೆದ ಮಾರ್ಚ್‌ ನಲ್ಲಿ ಚಾರ್ ಸಡ್ಡಾದ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ನಡೆದ ಬಾಂಬ್‌ ಸ್ಫೋಟದಿಂದಾಗಿ ಹದಿನೇಳು ಮಂದಿ ಮೃತಪಟ್ಟಿದ್ದರು. ಕಳೆದ ಗುರುವಾರ ಸಿಂದ್ ಪ್ರಾಂತದ ಧಾರ್ಮಿಕ  ಕೇಂದ್ರದಲ್ಲಿ ಆಹ್ಮಾಹುತಿ ದಾಳಿಯಿಂದಾಗಿ 88 ಮಂದಿ ಸಾವಿಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News