ಜಲ್ಲಿಕಟ್ಟು,ಕಂಬಳಕ್ಕೆ ಅವಕಾಶ ನೀಡುವ ಕಾನೂನುಗಳ ವಿರುದ್ಧ ಸುಪ್ರೀಂ ಮೆಟ್ಟಿಲು ಹತ್ತಲು ಪೆಟಾ ಸಜ್ಜು

Update: 2017-02-21 12:52 GMT

ಹೊಸದಿಲ್ಲಿ,ಫೆ.21: ಜಲ್ಲಿಕಟ್ಟು ಮತ್ತು ಕಂಬಳ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಗಳು ಅಂಗೀಕರಿಸಿರುವ ವಿಧೇಯಕಗಳನ್ನು ತಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಪ್ರಾಣಿ ಹಕ್ಕುಗಳ ಸಂಘಟನೆ ಪೆಟಾ ತಿಳಿಸಿದೆ. ಆದರೆ ಈ ಎರಡೂ ವಿಧೇಯಕಗಳನ್ನು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಪ್ರಶ್ನಿಸುವುದೇ ಎಂಬ ಬಗ್ಗೆ ಅದಿನ್ನೂ ನಿರ್ಧರಿಸಿಲ್ಲ.

ತಮಿಳುನಾಡು ಮತ್ತು ಕರ್ನಾಟಕ ವಿಧಾನಸಭೆಗಳು ಅಂಗೀಕರಿಸಿರುವ ಶಾಸನಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಪೆಟಾದ ನಿರ್ದೇಶಕ (ವೆಟರ್ನರಿ ಅಫೇರ್ಸ್) ಮಣಿಲಾಲ್ ವಲ್ಲಿಯಾಟ ತಿಳಿಸಿದರು.

ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿರುವ ತಮಿಳನಾಡಿನ ನೂತನ ಶಾಸನಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯವು ಜ.31ರಂದು ನಿರಾಕರಿಸಿತ್ತು. ಆದರೆ ಅದು ಶಾಸನವನ್ನು ಪ್ರಶ್ನಿಸಲು ತಮ್ಮ ಬಾಕಿಯಿರುವ ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು ಪೆಟಾ ಸೇರಿದಂತೆ ಪ್ರಾಣಿಹಕ್ಕು ಸಂಸ್ಥೆಗಳಿಗೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News