ಬಂದ್ ನಡೆಯಬೇಕಿರೋದು ಬಿಜೆಪಿಯ ಪಾಕಿಸ್ತಾನ್ ಲಿಂಕಿನ ವಿರುದ್ದ

Update: 2017-02-22 05:43 GMT

ಬಿಜೆಪಿಯ ಐ.ಟಿ. ಸೆಲ್ ಮತ್ತು ಪಕ್ಷದೊಳಗೇ ಇದ್ದು ಪಾಕಿಸ್ತಾನದ ಗೂಢಚರ ಸಂಸ್ಥೆ ಐ.ಎಸ್.ಐಯಿಂದ ಹಣ ಪಡೆದು ಇಂಡಿಯನ್ ಆರ್ಮಿ ಬೇಸ್ ಗಳ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಮಾರಿಕೊಂಡವರು ಬಿಜೆಪಿಗರು. ಪರಿಣಾಮ.. 2015-16ರಲ್ಲಿ ಭಾರತದ ಸೇನಾನೆಲೆಗಳು ಮತ್ತು ತುಕಡಿಗಳ ಮೇಲೆ ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಪಾಕ್ ಸೈನಿಕರು ಮತ್ತು ಉಗ್ರರು ದಾಳಿ ನಡೆಸಿ ನಮ್ಮ ಸೈನಿಕರನ್ನು ಕೊಂದರು. ಶತ್ರುದೇಶಕ್ಕೆ ಮಾಹಿತಿ ರವಾನಿಸಿ ನಮ್ಮದೇ ಸೈನಿಕರನ್ನು ಕೊಲ್ಲಿಸಿದ ಬಿಜೆಪಿಗರು ದೇಶಭಕ್ತರು.

ಕಳೆದ 2016ರ ಸೆಪ್ಟಂಬರ್ ನಲ್ಲಿ ಉರಿ ಸೇನಾನೆಲೆಯ ಮೇಲೆ ನಡೆದ ಪಾಕ್ ಧಾಳಿಯಲ್ಲಿ ಕೆಳಗಿನ ಚಿತ್ರದಲ್ಲಿರುವ 17 ಮಂದಿ ಭಾರತೀಯ ಸೈನಿಕರು ಜೀವ ಕಳೆದು ಕೊಂಡರು. ಅದರ ನಂತರ ಒಂದರ ಹಿಂದೊಂದು ಪಾಕ್ ಧಾಳಿಗಳು ನಮ್ಮ ಸೈನ್ಯದ ಮೇಲೆ ನಡೆದವು. ಸೈನಿಕರು ಪ್ರಾಣ ಬಿಟ್ಟರು. ಪಟ್ಟಿ ಕೆಳಕಂಡಂತಿದೆ.

ಅಕ್ಟೋಬರ್ 16. 
ರಾಜೌರಿಯ ತಾರ್ಕುಂದಿ ಗಡಿಯಲ್ಲಿ ರಜಪೂತ್ ರೆಜಿಮೆಂಟ್ ಮೇಲೆ ಪಾಕ್ ನಡೆಸಿದ ಧಾಳಿಯಲ್ಲಿ ಸೈನಿಕ ಸುದೇಶ್ ಕುಮಾರ್ ಜೀವ ತೆತ್ತರು.

ಅಕ್ಟೋಬರ್ 22 
ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಗಡಿಯಲ್ಲಿ ಪಾಕ್ ಧಾಳಿ ಬಿ.ಎಸ್.ಎಫ್ ಸೈನಿಕ ಗುರ್ನಾಮ್ ಸಿಂಗ್ ಜೀವ ಕಳೆದುಕೊಂಡರು.

ಅಕ್ಟೋಬರ್ 24 
ಹರಿಯಾಣದ ಆರ್.ಎಸ್.ಪುರ ಸೆಕ್ಟರ್ ಬೇಸ್ ಮೇಲೆ ಪಾಕ್ ಧಾಳಿ. ಸೈನಿಕ ಸುಶೀಲ್ ಕುಮಾರ್ ಪ್ರಾಣ ಕಳೆದುಕೊಂಡರು.

ಅಕ್ಟೋಬರ್ 27
ಜಮ್ಮುಕಾಶ್ಮೀರ ಗಡಿಯಲ್ಲಿ ಪಾಕ್ ಉಗ್ರರು ನಡೆಸಿದ ಶೆಲ್ ಧಾಳಿಯಲ್ಲಿ ಜಿತೇಂದ್ರ ಸಿಂಗ್ ಎಂಬ ಸೈನಿಕನ ದುರ್ಮರಣ.

ಅಕ್ಟೋಬರ್ 28 
ಗಡಿಯ ತಾಂಗ್ಧಾರ್ ಭಾಗದಲ್ಲಿ ಪಾಕ್ ನಡೆಸಿದ ಧಾಳಿಗೆ ಸಂದೀಪ್ ಸಿಂಗ್ ರಾವತ್ ಎಂಬ ಸೈನಿಕ ಜೀವ ಕಳೆದುಕೊಂಡರು.

ಇದೇ ದಿನ ಕಾಶ್ಮೀರದ ಮಚ್ಚಿಲ್ ಪ್ರದೇಶದಲ್ಲಿ ಪಾಕ್ ಉಗ್ರರು ನಡೆಸಿದ ಧಾಳಿಗೆ ಮಂದೀಪ್ ಸಿಂಗ್ ರಾವತ್ ಎಂಬ ಸೈನಿಕ ಪ್ರಾಣ ಬಿಟ್ಟರು. ಇವರ ದೇಹವನ್ನು ಛಿದ್ರಛಿದ್ರಗೊಳಿಸಲಾಗಿತ್ತು.

ಇದೇ ದಿನ ಇದೇ ಪ್ರದೇಶದಲ್ಲಿ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಿತಿನ್ ಸುಭಾಶ್ ಎಂಬ ಸೈನಿಕ ಜೀವ ಬಿಟ್ಟರು.

ಅಕ್ಟೋಬರ್ 31
ಜಮ್ಮುಕಾಶ್ಮೀರ ಗಡಿಯ ಮೆಂಧರ್ ಪ್ರದೇಶದಲ್ಲಿ ಪಾಕ್ ನಡೆಸಿದ ಧಾಳಿಯಲ್ಲಿ ಓರ್ವ ಯೋಧ ಮತ್ತು ಒಬ್ಬ ಸಿವಿಲಿಯನ್ ಮಹಿಳೆ ಪ್ರಾಣ ಬಿಟ್ಟರು.

ನವೆಂಬರ್ 6
ಪೂಂಛ್ ಗಡಿಯಲ್ಲಿ ಪಾಕ್ ನಡೆಸಿದ ಶೆಲ್ ಧಾಳಿಯಲ್ಲಿ ಗುರುಸೇವಕ್ ಸಿಂಗ್, ರಾಜೇಂದ್ರ ನಾರಾಯಣ್ ಎಂಬ ಸೈನಿಕರು ಭೀಕರವಾಗಿ ಹತರಾದರು.

ನವೆಂಬರ್ 8
ಇದೇ ಪೂಂಚ್ ಗಡಿಯಲ್ಲಿ ನಡೆದ ಪಾಕ್ ಧಾಳಿಯಲ್ಲಿ ನಾಯಕ್ ಪ್ರೀತಂ ಸಿಂಗ್ ಎಂಬ ಸೈನಿಕ ಜೀವ ಬಿಟ್ಟರು.

ನವೆಂಬರ್ 9 
ನೌಶೇರ ಸೆಕ್ಟರ್ ಬೇಸ್ ಮೇಲೆ ಪಾಕ್ ಧಾಳಿ ನಡೆಸಿ ಒಬ್ಬ ಭಾರತೀಯ ಸೈನಿಕನನ್ನು ಕೊಂದು ಹಾಕಿತು.

ನವೆಂಬರ್ 22 
ಕೆಲವೇ ದಿನಗಳ ಹಿಂದೆ ಧಾಳಿ ನಡೆಸಲಾದ ಮಚ್ಚಿಲಿ ಸೆಕ್ಟರ್ ಮೇಲೆ ಮತ್ತೆ ಧಾಳಿ ನಡೆಸಿದ ಪಾಕ್ ನಮ್ಮ ಮೂವರು ಸೈನಿಕರ ಪ್ರಾಣ ತೆಗೆಯಿತು.

ಇವೆಲ್ಲ ಧಾಳಿಗಳನ್ನು ಒಂದರ ಹಿಂದೊಂದರಂತೆ ನಡೆಸಿದ ಪಾಕ್ ಹಿಂದೆಂದೂ ಇಷ್ಟು ನಾನ್ ಸ್ಟಾಪ್ ಧಾಳಿಗಳನ್ನು ಭಾರತದ ಸೈನಿಕರ ಮೇಲೆ ನಡೆಸಿರಲಿಲ್ಲ. ಇದು ಕೇವಲ ಉರಿ ಅಟ್ಯಾಕ್ ನಂತರ ನಡೆದ ಧಾಳಿಗಳು. ತದನಂತರ ಭಾರತದ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಭಾರತದ ಸೇನಾನೆಲೆಗಳ ರಹಸ್ಯ ಮಾಹಿತಿಗಳು ಪಾಕಿಸ್ತಾನಕ್ಕೆ ಹೇಗೆ ತಲುಪುತ್ತಿವೆ ಅಂತ ತನಿಖೆಗೆ ಇಳಿಯುತ್ತದೆ. ದೊರೆತ ಮಾಹಿತಿಯ ಮೇಲೆ ರೈಡ್ ಗಳಿಗೆ ಇಳಿದಾಗ ಸಿಕ್ಕಿಬಿದ್ದದ್ದು ಇದೇ ದೇಶಭಕ್ತ ಬಿಜೆಪಿಗರ ಪಟಾಲಂ. ಸೈನ್ಯದ ಮಾಹಿತಿಗಳನ್ನ ಪಾಕಿಸ್ತಾನಕ್ಕೆ ಮಾರಿಕೊಂಡು ನಮ್ಮದೇ ಸೈನಿಕರನ್ನು ಕೊಲ್ಲಿಸುವ ದೇಶಭಕ್ತಿ ಬಿಜೆಪಿಗರದ್ದು.

ಐಕ್ಯತಾ ಜಾಥಾ ಪ್ರತಿಭಟಿಸಿ ಮಂಗಳೂರು ಬಂದ್ ನಡೆಯುತ್ತಂತೆ. ಈ ಬಂದ್ ನಡೆಯಬೇಕಿರೋದು ಬಿಜೆಪಿಯ ಪಾಕಿಸ್ತಾನ್ ಲಿಂಕಿನ ವಿರುದ್ದ. ನಮ್ಮ ಸೈನಿಕರನ್ನು ಕೊಂದು ಮೆರೆಯುತ್ತಿರೋ ಪಾಕಿಸ್ತಾನವನ್ನ ಭಯೋತ್ಪಾದಕ ದೇಶ ಅಂತ ಘೋಷಣೆ ಮಾಡೋಕೆ ಆಗಲ್ಲ ಅಂತ ಹೇಳಿದ ನರಸತ್ತ ಬಿಜೆಪಿ ಸರಕಾರದ ವಿರುದ್ಧ.

ಗೆಳೆಯರ ಐಕ್ಯತಾ ಸಮಾವೇಶ ಯಶಸ್ವಿಯಾಗಲಿ.
ಕೋಮುವಾದಿಗಳ ಪಿತೂರಿ ಮಣ್ಣು ಮುಕ್ಕಲಿ.

Full View

Writer - ಟಿ.ಕೆ.ದಯಾನಂದ್

contributor

Editor - ಟಿ.ಕೆ.ದಯಾನಂದ್

contributor

Similar News