×
Ad

ಶಾಲಾ ಶುಲ್ಕ ಪಾವತಿ ವಿಚಾರ: ವಿದ್ಯಾರ್ಥಿಗಳ ತಂದೆಯಂದಿರಿಂದ ವಿಚಿತ್ರ ಪ್ರತಿಭಟನೆ

Update: 2017-02-22 11:31 IST

ಜಲಂಧರ್, ಫೆ.22: ಶಾಲಾ ಶುಲ್ಕ ಪಾವತಿಗೆ ಸಂಬಂಧಿಸಿ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ತಂದೆಯಂದಿರು ಶಾಲೆಯ ಮುಂಭಾಗ ಶರ್ಟ್‌ಗಳನ್ನು ಕಳಚಿ ಪ್ರತಿಭಟನೆ ನಡೆಸಿದ್ದಾರೆ.

ಶಾಲಾ ಶುಲ್ಕಗಳನ್ನು ಪಾವತಿಸದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಂತಿಮ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿ ನಿರಾಕರಿಸಿರುವುದೇ ತಂದೆಯಂದಿರ ಈ ಪ್ರತಿಭಟನೆಗೆ ಕಾರಣವಾಗಿದೆ.

ಶಾಲೆಯ ಶುಲ್ಕವನ್ನು ಕಟ್ಟದೆ ಇದ್ದರೆ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಜಲಂಧರ್‌ನ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿರುವ ಶಾಲಾ ಆಡಳಿತ ಮಂಡಳಿ ಹೆತ್ತವರಿಗೆ ನೋಟಿಸ್‌ನ್ನು ಜಾರಿ ಮಾಡಿತ್ತು. ಹೆತ್ತವರಿಗೆ ನೀಡಿರುವ ನೋಟಿಸ್‌ಗೆ ಸಂಬಂಧಿಸಿ ಪ್ರಾಂಶುಪಾಲರನ್ನು ಭೇಟಿಯಾಗಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೆರಳಿದ ವಿದ್ಯಾರ್ಥಿಗಳ ತಂದೆಯಂದಿರು ಶರ್ಟ್‌ಗಳನ್ನು ಕಳಚಿ ಪ್ರತಿಭಟನೆ ನಡೆಸಿದರು. ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು. ಆದರೆ ಸಮಸ್ಯೆಗೆ ಮಾತ್ರ ಪರಿಹಾರ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News