ಗ್ವಾಂಟನಾಮೊ ಕೊಲ್ಲಿ ಜೈಲನ್ನು ಮುಚ್ಚುವುದಿಲ್ಲ :ಟ್ರಂಪ್ ಆಡಳಿತ ಇಂಗಿತ

Update: 2017-02-22 15:22 GMT

ವಾಶಿಂಗ್ಟನ್, ಫೆ. 22: ‘ಅಪಾಯಕಾರಿ ಶಂಕಿತ ಭಯೋತ್ಪಾದಕರನ್ನು’ ಇರಿಸುವ ಗ್ವಾಂಟನಾಮೊ ಕೊಲ್ಲಿ ಕಾರಾಗೃಹವನ್ನು ಮುಚ್ಚುವುದಿಲ್ಲ ಎಂಬ ಸೂಚನೆಯನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನೀಡಿದೆ.

ಈ ಕಾರಾಗೃಹವು ರಾಷ್ಟ್ರೀಯ ಭದ್ರತೆಯ ನಿಟ್ಟಿನಲ್ಲಿ ‘ಆರೋಗ್ಯಕರ’ವಾಗಿದೆ ಎಂದಿದೆ.

‘‘ನಮ್ಮ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗ್ವಾಂಟನಾಮೊ ಕೊಲ್ಲಿಯ ಸೆರೆಮನೆ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂಬುದಾಗಿ ಅವರು (ಅಧ್ಯಕ್ಷ ಡೊನಾಲ್ಡ್ ಟ್ರಂಪ್) ಭಾವಿಸಿದ್ದಾರೆ ಹಾಗೂ ನಾವು ಭಯೋತ್ಪಾದಕರನ್ನು ನಮ್ಮ ಸಮುದ್ರಗಳಿಗೆ ತರುವುದಿಲ್ಲ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿ ಅವರು ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಕಾರಾಗೃಹವನ್ನು ಮುಚ್ಚಲು ಟ್ರಂಪ್ ಪೂರ್ವಾಧಿಕಾರಿ ಬರಾಕ್ ಒಬಾಮ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News