ಈ ಕೊಲೆಗಳಿಗೆ ‘ಮಂಗಳೂರು ಬಂದ್’ ಏಕಿಲ್ಲ?

Update: 2017-02-22 18:57 GMT

ಮಾನ್ಯರೆ,
 ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಫೆ. 25ರಂದು ಮಂಗಳೂರಿಗೆ ಬರುವುದನ್ನು ವಿರೋಧಿಸಿ ಸಂಘ ಪರಿವಾರದವರು ಹರತಾಳ ಆಚರಿಸುವ ಎಚ್ಚರಿಕೆ ನೀಡಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ಟ್‌ರಿಂದ ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗುವುದನ್ನು ಪ್ರತಿಭಟಿಸಿ ಫೆ. 25ರಂದು ‘ಮಂಗಳೂರು ಬಂದ್’ ಎನ್ನಲಾಗಿದೆ. ಕೇರಳದಲ್ಲಿ ಆರೆಸ್ಸೆಸ್‌ನವರೂ ಸುಮಾರು 300 ಕಮ್ಯುನಿಸ್ಟ್ಟರ ಕೊಲೆಗಳನ್ನು ಮಾಡಿದ್ದು ಅದರಲ್ಲಿ 290 ಜನ ಹಿಂದೂಗಳೇ ಆಗಿದ್ದಾರೆ. ಕೊಲೆಯಾದವರು ಕಮ್ಯುನಿಸ್ಟರಾದರೇನಂತೆ ಅವರೂ ಹಿಂದೂಗಳೇ ತಾನೇ. ಅದು ಬಿಡಿ, ನಮ್ಮ ದ.ಕ.-ಉಡುಪಿ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳವರೇ ಹಿಂದೂಗಳ ಕಗ್ಗೊಲೆ ಮಾಡುತ್ತಿದ್ದಾರೆ. ಅದಕ್ಕೆ ಸಂಘ ಪರಿವಾರದವರ ಮಂಗಳೂರು ಬಂದ್ ಇಲ್ಲವೇ? ಮೊನ್ನೆ ಮೊನ್ನೆ ಮರೋಳಿಯ ಪ್ರತಾಪ್ ಪೂಜಾರಿಯ ಕೊಲೆಯಾಯಿತು. ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದ ಅವರನ್ನು ಅವರದೇ ಸಂಘಟನೆಯ ಸದಸ್ಯರು ಕೂಡಿ ಕೊಲೆ ಮಾಡಿದರು. ಇದಕ್ಕಾಗಿ ‘ಮಂಗಳೂರು ಬಂದ್’ ಯಾಕಿಲ್ಲ? ಇಷ್ಟೇ ಅಲ್ಲ ಇದಕ್ಕೆ ಮೊದಲು ವಿನಾಯಕ ಬಾಳಿಗಾ ಸಹಿತ 13 ಜನ ಹಿಂದೂಗಳ ಕೊಲೆಯನ್ನು ಹಿಂದುತ್ವ ಸಂಘಟನೆಗೆ ಸೇರಿದವರೇ ಮಾಡಿದ್ದಾರೆ. ಸತ್ತ 13 ಜನರು ಸಹ ಹಿಂದುತ್ವ ಸಂಘಟನೆಗಳಿಗೆ ಸೇರಿದವರೇ ಆಗಿದ್ದರು. ಹಾಗಾದರೆ ಇವರ ಕೊಲೆಗಾಗಿ ‘ಮಂಗಳೂರು ಬಂದ್’ ಯಾವಾಗ?
ಸಂಘ ಪರಿವಾರದ ಸದಸ್ಯರಿಂದಲೇ ಕೊಲೆಯಾದ 13 ಹಿಂದೂ ಸದಸ್ಯರ ಹೆಸರು ಹೀಗಿವೆ:- ವಿನಾಯಕ ಬಾಳಿಗಾ ಮಂಗಳೂರು, ಪ್ರವೀಣ್ ಪೂಜಾರಿ ಉಡುಪಿ, ಕೃಷ್ಣಯ್ಯ ಪಾಟಾಳಿ ಕುಂದಾಪುರ, ಪ್ರತಾಪ್ ಪೂಜಾರಿ ಮರೋಳಿ, ಭಾಸ್ಕರ ಕುಂಬ್ಳೆ, ಶ್ರೀನಿವಾಸ್ ಬಜಾಲ್, ಹರೀಶ್ ಭಂಡಾರಿ ಕುಳಾಯಿ, ಶಿವರಾಜ್ ಕೋಡಿಕೆರೆ, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್, ಕೇಶವ ಪೂಜಾರಿ ಸೂರಿಂಜೆ, ಹರೀಶ್ ಪೂಜಾರಿ ಬಂಟ್ವಾಳ. ಇವರಲ್ಲಿ ಕೆಲವು ಕೊಲೆಗಳು ಸಂಘಟನೆಯ ಒಳಗಡೆಯೇ ತಮ್ಮ ಆಕ್ರಮಗಳನ್ನು ಪ್ರಶ್ನಿಸಿದ್ದಕ್ಕಾಗಿ ನಡೆದ ಕೊಲೆಗಳಾದರೆ ಇನ್ನು ಕೆಲವು ಹಫ್ತಾ ವಸೂಲಿಯ ಬಟವಾಡೆಯಲ್ಲಿ ಎದ್ದ ತಕರಾರಿನಿಂದ ಆದ ಕೊಲೆಗಳು, ಮತ್ತೆ ಕೆಲವು ನಾಯಕತ್ವದ ಹಪಾಹಪಿಯಲ್ಲಿ ನಡೆದ ಕೊಲೆಗಳು. ಇವಕ್ಕೆಲ್ಲ ‘ಮಂಗಳೂರು ಬಂದ್’ ಯಾವಾಗ ಎಂದು ನಾವು ಎದುರು ನೋಡುತ್ತಿದ್ದೇವೆ.
 

Writer - ಆರ್. ಬಿ. ಶೇಣವ, ಮಂಗಳೂರು

contributor

Editor - ಆರ್. ಬಿ. ಶೇಣವ, ಮಂಗಳೂರು

contributor

Similar News