ಪೊಲೀಸ್ ಇಲಾಖೆಗೆ ಏಕ ಗವಾಕ್ಷಿ ಪದ್ಧತಿ ಸ್ವಾಗತಾರ್ಹ

Update: 2017-02-22 18:58 GMT

ಮಾನ್ಯರೆ,
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಸಿಬ್ಬಂದಿಯ ವೇತನ ಹೆಚ್ಚಳ, ಮುಂಭಡ್ತಿ, ಹೊಸ ವಸತಿ ಗೃಹಗಳು, ಆರೋಗ್ಯ ಭಾಗ್ಯ ಹೀಗೆ ಹಲವು ರೀತಿಯ ಸುಧಾರಣೆಯಾಗಿದ್ದು ಈಗ ಮತ್ತಷ್ಟು ಸುಧಾರಣೆಗೆ ಇಲಾಖೆ ಮುಂದಾಗಿದೆ. ಪೊಲೀಸ್ ಇಲಾಖೆಯ ಡಿಎಆರ್, ಸಿಎಆರ್, ಕೆಎಸ್‌ಆರ್‌ಪಿ ಮತ್ತು ಸಿವಿಲ್ ಸಿಬ್ಬಂದಿಯ ನಡುವಿನ ಅಸಮಾನತೆ ತೊಲಗಿಸಿ ಸಮಾನ ತರಬೇತಿ, ವರ್ಗಾವಣೆ, ಸಾಮರಸ್ಯ, ಆರ್ಡರ್ಲಿ ಪದ್ಧತಿಯಿಂದ ಮುಕ್ತಿ ಹಾಗೂ ಸಮಯಕ್ಕೆ ಸರಿಯಾಗಿ ಭಡ್ತಿ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ನೇಮಕಕ್ಕೆ ಏಕ ಗವಾಕ್ಷಿ ಪದ್ಧತಿ ಜಾರಿಗೊಳಿಸಲು ಡಿಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹ.
ಏಕ ಗವಾಕ್ಷಿ ಪದ್ಧತಿ ಜಾರಿಯಾದರೆ ರಾಜ್ಯ ಸರಕಾರಕ್ಕೆ ಕೋಟ್ಯಂತರ ಹಣ ಉಳಿತಾಯ ಆಗುವುದಲ್ಲದೆ ಪೊಲೀಸ್ ಸಿಬ್ಬಂದಿಯ ಕೊರತೆ ಕೂಡಾ ಇರುವುದಿಲ್ಲ. ಈ ಏಕ ಗವಾಕ್ಷಿ ಪದ್ಧತಿ ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದ್ದರಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಮಹತ್ತರ ಸುಧಾರಣೆಗೆ ಹಾಗೂ ಸಿಬ್ಬಂದಿಗಳಿಗೆ ಹೊಸ ಚೈತನ್ಯಕ್ಕಾಗಿ ಏಕ ಗವಾಕ್ಷಿ ಪದ್ಧತಿ ಉತ್ತಮ ನಿರ್ಧಾರವಾಗಿದೆ.
 

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News