ವಜ್ರಗಳೇಕೆ ಹೊಳೆಯುತ್ತವೆ...?

Update: 2017-02-23 06:10 GMT

ವಜ್ರವೊಂದು ಬಣ್ಣದೊಂದಿಗೆ ಹೊಳೆಯಬೇಕಾದರೆ ಮೇಲಿನ ಹೊರಮೈ ಮೂಲಕ ಪ್ರವೇಶಿಸುವ ಬೆಳಕು ಬಣ್ಣಗಳಾಗಿ ಪ್ರತ್ಯೇಕಗೊಳ್ಳಬೇಕು ಮತ್ತು ಮೇಲಿನ ಹೊರಮೈ ಮೂಲಕವೇ ಮರಳಬೇಕು.

 ಹೀಗೆ ಬೆಳಕು ತಳಮೈಯನ್ನು ತಲುಪಿದಾಗ ಅದು ಸಂಪೂರ್ಣವಾಗಿ ಪ್ರತಿಫಲನ ಗೊಳ್ಳಬೇಕು ಮತ್ತು ಆ ಮೈ ಮೂಲಕ ಹೊರಗೆ ಹೋಗಬಾರದು. ತಳಮೈ ಮೂಲಕ ಬೆಳಕು ಹೊರಗೆ ಹೋಗದಂತಿರಲು ಅದನ್ನು ಬೆಳಕು ಸಾಗುವ ದಿಕ್ಕಿಗೆ ಅನುಗುಣವಾದ ಕೋನದಲ್ಲಿಯೇ ರೂಪಿಸಲಾಗುತ್ತದೆ ಅಥವಾ ‘ಕಟಿಂಗ್’ ಮಾಡಲಾಗುತ್ತದೆ ಮತ್ತು ಇದು ಎಲ್ಲ ಬೆಳಕನ್ನು ಅದು ಪ್ರತಿಫಲಿಸುವಂತೆ ಮಾಡುತ್ತದೆ.ಇದಕ್ಕೆ ಸಮಗ್ರ ಆಂತರಿಕ ಪ್ರತಿಫಲನ ಎಂದು ಹೇಳಲಾಗುತ್ತದೆ. ಹೀಗಾಗಿ ತಳಭಾಗದ ಹೊರಮೈನಿಂದ ನೋಡಿದಾಗ ಕಪ್ಪಾಗಿ ಕಾಣುತ್ತದೆ.

 ಅದರೆ ತಳ ಹೊರಮೈ ಎಣ್ಣೆ ಅಥವಾ ಅಂತಹುದೇ ವಸ್ತುವಿನಿಂದ ಲೇಪಿತವಾಗಿದ್ದರೆ ಈ ಕೋಟಿಂಗ್ ಮೂಲಕ ಸ್ವಲ್ಪ ಬೆಳಕು ಹೊರಗೆ ಹೋಗಬಹುದು ಮತ್ತು ಇದು ವಜ್ರದ ಹೊಳಪನ್ನು ತಗ್ಗಿಸುತ್ತದೆ. ಹೀಗಾಗಿ ವಜ್ರವು ಉಜ್ವಲವಾಗಿ ಹೊಳೆಯುತ್ತಿರಲು ಮೇಲಿನ ಮತ್ತು ತಳಭಾಗದ ಹೊರಮೈಗಳನ್ನು ಸ್ವಚ್ಛವಾಗಿರಿಸುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News