ಕರಿದ ತಿಂಡಿಗಳು ಹೊರಗೆ ಗಟ್ಟಿಯಾಗಿದ್ದರೂ ಒಳಗೆ ಮೃದು… ಏಕೆ?

Update: 2017-02-23 11:15 GMT

ಬಟಾಟೆಯಂತಹ ಆಹಾರವಸ್ತುಗಳ ತೆಳ್ಳನೆಯ ಬಿಲ್ಲೆಗಳನ್ನು ಎಣ್ಣೆಯಲ್ಲಿ ಕರಿದಾಗ ಮೇಲ್ಭಾಗದಲ್ಲಿ ಸುವಾಸನೆಭರಿತ ಗಟ್ಟಿ ಪದರವೊಂದು ರೂಪುಗೊಂಡರೂ ಒಳಗಿನ ತಿರುಳು ಮೃದುವಾಗಿಯೇ ಇರುತ್ತದೆ...ಏಕೆ ಎಂದು ಯೋಚಿಸಿದ್ದೀರಾ?

ಬಟಾಟೆ ಕುದಿಯುವ ಎಣ್ಣೆಯನ್ನು ಸ್ಪರ್ಶಿಸಿದಾಗ ಅದರ ಮೇಲ್ಮೈನ ರಂಧ್ರಗಳಲ್ಲಿರುವ ನೀರು ಆವಿಯಾಗುತ್ತದೆ ಮತ್ತು ರಂಧ್ರಗಳ ದ್ವಾರಗಳಿಂದ ಹೊರಹೋಗುವ ಆವಿ ಗುಳ್ಳೆಗಳ ರೂಪ ತಳೆಯುತ್ತದೆ. ಹೀಗಾಗಿ ಬಿಲ್ಲೆಯ ಹೊರಭಾಗದೊಂದಿಗೆ ಸಂಪರ್ಕದಲ್ಲಿರುವ ಎಣ್ಣೆಯಲ್ಲಿ ಈ ಗುಳ್ಳೆಗಳು ಕಾಣಿಸಿಕೊಡು ನೊರೆಯಂತೆ ತೋರಿಬರುತ್ತದೆ. ಈ ಸಂದರ್ಭ ಶಬ್ದವನ್ನೂ ಕೇಳಬಹುದಾಗಿದೆ.

ಬಟಾಟೆಯ ಮೇಲ್ಮೈ ನೀರಿನಂಶವನ್ನು ಕಳೆದುಕೊಂಡಾಗ ಅದು ಗಟ್ಟಿಯಾಗಿ ಹೊರಪದರವನ್ನು ನಿರ್ಮಿಸುತ್ತದೆ. ಹೆಚ್ಚಿನ ಉಷ್ಣತೆಯೂ ಕೆಲವೊಂದು ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗಿ ಕರಿದ ತಿಂಡಿಗೆ ಅದರದೇ ಆದ ಪರಿಮಳವನ್ನು ನೀಡುತ್ತದೆ.

ಕರಿಯುವಿಕೆ ಮುಂದುವರಿದಂತೆ ಉಷ್ಣತೆಯು ಬಟಾಟೆ ಬಿಲ್ಲೆಯ ಒಳಭಾಗಕ್ಕೆ ವರ್ಗಾವಣೆಗೊಳ್ಳುತ್ತದೆ ಮತ್ತು ಅದನ್ನು ಬೇಯಿಸುತ್ತದೆ. ಆದರೆ ತಿರುಳಿನಲ್ಲಿ ನೀರು ಇರುವುದರಿಂದ ಉಷ್ಣತೆಯು ನೀರಿನ ಕುದಿಯುವ ಬಿಂದುವಿಗಿಂತ ಹೆಚ್ಚೇನೂ ಏರುವುದಿಲ್ಲ. ಹೀಗಾಗಿ ಒಳಭಾಗವು ನೀರಿನಂಶವನ್ನುಳಿಸಿಕೊಂಡೇ ಬೇಯುತ್ತದೆ ಮತ್ತು ಗಟ್ಟಿ ಪದರ ನಿರ್ಮಾಣವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News