ವೆದ್ಯಕೀಯ ವೃತ್ತಿ ಅತ್ಯುನ್ನತ ಸೇವೆ: ರಿಮಿ ಟೋಮಿ

Update: 2017-02-23 18:39 GMT

ಮಂಗಳೂರು, ಫೆ.23: ವೈದ್ಯಕೀಯ ವೃತ್ತಿ ಅತ್ಯುನ್ನತ ಸೇವೆಯಾಗಿದ್ದು, ಕಷ್ಟಕಾಲದಲ್ಲಿ ವೈದ್ಯರು ದೇವ ಸ್ವರೂಪಿಗಳು. ಜನಸೇವೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತು ವೈದ್ಯಕೀಯ ವೃತ್ತಿಗೆ ಬರುತ್ತಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಿನ್ನೆಲೆ ಗಾಯಕಿ ಹಾಗೂ ಮಲಯಾಳಂ ಟೆಲಿವಿಷನ್ ನಿರೂಪಕಿ, ನಟಿ ರಿಮಿ ಟೋಮಿ ಹಾರೈಸಿದರು.

ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಫೆ.22ರಿಂದ 25ರವರೆಗೆ ಆಯೋಜಿಸಲಾಗಿರುವ ‘ಆಡ್ರಿನಾಲಿನ್-2017’ ಅಂತರ್ ಕಾಲೇಜು ಸಂಗೀತ, ಕಲೆ ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಿನೆಮಾ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನ ರಂಜಿಸಿದರು.

ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ನಿರ್ದೇಶಕ ಫಾ. ಪ್ಯಾಟ್ರಿಕ್ ರಾಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರಿಚರ್ಡ್ ಕುವೆಲ್ಲೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಫಾ. ಅಜಿತ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಳ್ವ, ಡಾ. ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.

ಡಾ.ನಿಕೋಲ್ ಪಿರೇರಾ ಸ್ವಾಗತಿಸಿ, ಫಾ. ಮುಲ್ಲರ್ ಮೆಡಿಕಲ್ ಕಾಲೇಜಿನ ಸ್ಟುಡೆಂಟ್ ಕೌನ್ಸಿಲ್‌ನ ಅಧ್ಯಕ್ಷ ರೇಮಂಡ್ ಆ್ಯಂಟನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News