ಒಬ್ಬ ಅಮೇರಿಕನ್ ಗುಂಡಿಕ್ಕಿದರೆ, ಇನ್ನೊಬ್ಬ ರಕ್ಷಿಸಿದ !

Update: 2017-02-24 05:29 GMT

ಕಾನ್ಸಾಸ್, ಫೆ.24 : ಕಾನ್ಸಾಸ್ ನಗರದ ಬಾರ್ ಒಂದರಲ್ಲಿ ಗುರುವಾರ ಅಮೆರಿಕನ್ ದುಷ್ಕರ್ಮಿಯೊಬ್ಬ ‘‘ನನ್ನ ದೇಶವನ್ನು ಬಿಟ್ಟು ತೊಲಗಿ’’ ಎಂದು ಬೊಬ್ಬೆ ಹೊಡೆಯುತ್ತಾ ಅಲ್ಲಿದ್ದ ಇಬ್ಬರು ಭಾರತೀಯ ಯುವಕರ ಮೇಲೆ ಗುಂಡಿನ ದಾಳಿ ನಡೆಸಿದ್ದು ಅವರಲ್ಲೊಬ್ಬ ಮೃತ ಪಟ್ಟರೆ, ಇನ್ನೊಬ್ಬ ಭಾರತೀಯ ಬಚಾವಾಗಿದ್ದಾರೆ. ಈ ನಡುವೆ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ದುಷ್ಕರ್ಮಿಯ ಮೇಲೆ ಎರಗಿ ಬಿದ್ದು ತನ್ನ ಜೀವದ ಹಂಗು ತೊರೆದು ಅವರ ರಕ್ಷಣೆಗೆ ಧಾವಿಸಿದ 24 ವರ್ಷದ ಅಮೇರಿಕನ್ ಯುವಕ ಇಯಾನ್ ಗ್ರಿಲ್ಲೊಟ್ ಗೆ ಭಾರೀ ಪ್ರಶಂಸೆ ಹರಿದುಬರುತ್ತಿದೆ.

ಗುರುವಾರ ಸಂಜೆ ಎಂದಿನಂತೆ ಬಾರ್ ಗೆ ಆಗಮಿಸಿ ನಂತರ ಸ್ಥಳೀಯವಾಗಿ ನಡೆಯುವ ಬಾಸ್ಕೆಟ್‌ಬಾಲ್ ಆಟವನ್ನು ನೋಡಲು ಬಯಸಿದ್ದ ಇಯಾನ್ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಮೊದಲು ಮೇಜಿನ ಅಡಿಯಲ್ಲಿ ನುಸುಳಿದ್ದರು. ದಾಳಿಕೋರನ ಬಳಿಯಿರುವ ಬುಲೆಟ್ ಖಾಲಿಯಾಯಿತೆಂದು ನಂತರ ಅವರು ಆತನ ಮೇಲೆ ಧೈರ್ಯದಿಂದ ಮುಗಿ ಬಿದ್ದಿದ್ದರು. ಆದರೆ ಅವರ ಅಂದಾಜು ತಪ್ಪಾಗಿತ್ತು. ದುಷ್ಕರ್ಮಿ ತನ್ನ ಬಳಿಯಿದ್ದ ಒಂದು ಸುತ್ತಿನ ಗುಂಡನ್ನು ಬಳಸಿ ಇಯಾನ್ ಭುಜ ಮತ್ತು ಎದೆಗೆ ಗುಂಡು ಹಾರಿಸಿಯೇ ಬಿಟ್ಟಿದ್ದ.

ಘಟನೆಯಲ್ಲಿ ಭಾರತೀಯ ಯುವಕ ಶ್ರೀನಿವಾಸ ಕಚಿಭೋಟ್ಲ(32) ಸಾವಿಗೀಡಾದರೆ, ಇನ್ನೊಬ್ಬ ಭಾರತೀಯ ಅಲೋಕ್ ಮದಸನಿ (32) ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಯಾನ್ ಪರಿಸ್ಥಿತಿ ಕೂಡ ಸ್ಥಿರವಾಗಿದೆ.

ಮದಸನಿ ಆಸ್ಪತ್ರೆಯ ತನ್ನ ಕೋಣೆಯ ಬಾಗಿಲಲ್ಲಿ ನಿಂತು ತನ್ನತ್ತ ಕೃತಜ್ಞತಾ ಭಾವದಿಂದ ನೋಡುತ್ತಿರುವುದನ್ನು ನೋಡಿ ತನಗೆ ಎದೆ ತುಂಬಿ ಬಂತು ಎಂದು ಹೇಳುವ ಇಯಾನ್ ಈ ಭಾರತೀಯ ತನ್ನ ಹೊಸ ಅತ್ಯುತ್ತಮ ಗೆಳೆಯ ಎಂದು ಬಿಟ್ಟರು. ಅವರು ಬದುಕುಳಿದಿರುವುದು ನನಗೆ ಸಂತಸ ತಂದಿದೆ. ಅದೇ ಸಮಯ ಅವರ ಸ್ನೇಹಿತ ಸಾವಿಗೀಡಾಗಿರುವುದು ಅಷ್ಟೇ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

ದಾಳಿಗೊಳಗಾದವರು ಎಲ್ಲಿಯವರು, ಯಾವ ಜನಾಂಗದವರು ಎಂಬುದು ಮುಖ್ಯವಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಎಲ್ಲರೂ ಮನುಷ್ಯರೇ’’ ಎಂದು ಇಯಾನ್ ಹೇಳುತ್ತಾರೆ.

ದುಷ್ಕರ್ಮಿ 51 ವರ್ಷದ ಆದಂ ಪುರಿಂಟನ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

.mcclatchy-embed{position:relative;padding:40px 0 56.25%;height:0;overflow:hidden;max-width:100%}.mcclatchy-embed iframe{position:absolute;top:0;left:0;width:100%;height:100%}
Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News