ಗೋವಾದಲ್ಲಿ ಬೀಚ್ ಮದುವೆಗೆ ನಿಷೇಧ ?
Update: 2017-02-24 16:06 IST
ಪಣಜಿ,ಫೆ. 24: ಗೋವಾದ ಪ್ರಸಿದ್ಧ ಬೀಚ್ ಮದುವೆಗಳಿಗೆ ಸಂಪೂರ್ಣ ವಿರಾಮ. ಬೀಚ್ ಮದುವೆಗಳನ್ನು ನಿಷೇಧಿಸಬೇಕೆಂದು ನ್ಯಾಶನಲ್ ಸೆಂಟರ್ ಫಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್(ಎನ್‌ಸಿಎಸ್‌ಸಿಎಂ)ಶಿಫಾರಸು ಮಾಡಿದೆ. ಅರಣ್ಯ ಪರಿಸರ ಸಚಿವಾಲಯ ಇದನ್ನು ಪರಿಶೀಲಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಗೋವಾ ಅದ್ದೂರಿ ಬೀಚ್ ವಿವಾಹಗಳ ವೇದಿಕೆಯಾಗಿ ಮಾರ್ಪಟ್ಟಿತ್ತು.
ಸಮುದ್ರ ತೀರದ ಬೃಹತ್ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಬೀಚ್‌ಗಳಲ್ಲಿ 800 ಮದುವೆಗಳು ಪ್ರತಿವರ್ಷ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪರಿಸರಕ್ಕೆ ಹಾನಿ ಯಾಗುತ್ತಿದೆ ಎಂದು ಎನ್‌ಸಿಎಸ್‌ಸಿಎಂ ಹೇಳುತ್ತಿದೆ. ಸಮುದ್ರ ತೀರದಲ್ಲಿ ನಡೆಯುವ ಇತರ ಆಚರಣೆಗಳು, ರಾತ್ರೆಸಂತೆಗಳನ್ನು ಕೂಡ ನಿಯಂತ್ರಿಸಬೇಕೆಂದು ಎನ್‌ಸಿಎಸ್‌ಸಿಎಂ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.