ಸಕರಾಯಪಟ್ಟಣದಲ್ಲಿದೆ ದಕ್ಷಿಣ ಭಾರತದಲ್ಲೇ ಹೆಚ್ಚು ವಿಸ್ತೀರ್ಣವಾಗಿರುವ ಬಿಲ್ವಪತ್ರೆ ವನ

Update: 2017-02-24 12:06 GMT

ಚಿಕ್ಕಮಗಳೂರು, ಫೆ.25: ಹೂದೋಟ, ಮಾವಿನ ತೋಪು ಹೀಗೆ ಹಲವು ಕಣ್ಮನ ಸೆಲೆಯುವ ಸ್ಥಳಗಳಿರುವುದು ಸರ್ವೇಸಾಮಾನ್ಯವಾದ ಸಂಗತಿ. ಆದರೇ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಅಪರೂಪವಾದ ಬಿಲ್ವಪತ್ರೆ ವನ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸಕರಾಯಪಟ್ಟಣದ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬಿಲ್ವಪತ್ರೆ ಮರಗಳು ಚಾಚಿಕೊಂಡಿವೆ. ದಕ್ಷಿಣ ಭಾರತದಲ್ಲೇ ಇಂತಹ ಬಿಲ್ವಪತ್ರೆ ವನ ಎಲ್ಲಿಯೂ ಇಲ್ಲ. ಅಲ್ಲದೇ ಒಂದೇ ಕಡೆ ಇಷ್ಟು ವಿಸ್ತೀರ್ಣವಾಗಿ ಬಿಲ್ವಪತ್ರೆ ಮರಗಳು ಚಾಚಿಕೊಂಡಿರುವುದು ಸಖರಾಯಪಟ್ಟಣದಲ್ಲಿ ಮಾತ್ರ. ಪ್ರಶಾಂತವಾದ ವಾತಾವರಣ ನೀಡುವ ಬಿಲ್ವಪತ್ರೆ ಮರದ ಇತಿಹಾಸವು ಕೂಡ ಅಷ್ಟೇ ರೋಚಕವಾಗಿದೆ. ದಕ್ಷಿಣ ಭಾರತದಲ್ಲೇ ವಿಸ್ತೀರ್ಣವಾಗಿ ಒಂದೇ ಕಡೆ ಇರುವ ಬಿಲ್ವಪತ್ರೆ ವನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ತನ್ನಿಂದ ತಾನೇ ಒತ್ತೋತ್ತಾಗಿ ಬೆಳೆದಿರುವ ಮರ ಎಂಬ ಪ್ರತೀತಿ ಇಲ್ಲಿದೆ. ಸರಿಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮರಗಳಿವೆ. ವಿಶಾಲವಾಗಿ ಚಾಚಿಕೊಂಡಿರುವ ಬಿಲ್ವಪತ್ರೆ ಮರಗಳು ಮನಸ್ಸಿಗೆ ಶಾಂತಿ, ಉಲ್ಲಾಸವನ್ನು ನೀಡುತ್ತಿದೆ. ಈ ಮರದ ಎಲೆಯನ್ನು ಶಿವನ ಮೇಲೆ ಹಾಕಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಭಿಕೆ ಭಕ್ತರಲ್ಲಿ ಇದೆ. ತಪಸ್ಸಿನ ಫಲವಾಗಿ ಈ ವನರಾಶಿ ಉದ್ಭವಿಸಿರುವ ಪ್ರತೀತಿ ಇಲ್ಲಿನದ್ದಾಗಿದೆ.

ಈ ಬಿಲ್ವಪತ್ರೆ ವನಕ್ಕೆ 800 ಸಾವಿರ ವರ್ಷಗಳ ಇತಿಹಾಸವಿದೆ. ಶಿವಪೂಜೆಗಾಗಿ ಬಂದ ಮರಳು ಸಿದ್ದೇಶ್ವರ ಎಂಬ ತಪಸ್ವಿ ಶಿವಪೂಜೆಗಾಗಿ ಸೃಷ್ಠಿಸಿದ ವನರಾಶಿವೆಂಬ ಪ್ರತೀತಿ ಇದೆ. ಮರಳು ಸಿದ್ದೇಶ್ವರ ಶಿವಪೂಜೆ ಮಾಡಲು ಸೃಷ್ಠಿಸಿದ ಬಿಲ್ವಪತ್ರೆ ಮರಗಳಿಗೆ ಅಂದಿನಿಂದಲೂ ಸ್ಥಳೀಯರು ಶಿವ ಕೃಪೆಯಿಂದ ಉದ್ಭವವಾಗಿರುವ ಮರ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ ಈಶ್ವರನ ದೇವಾಲಯದ ಮುಂದೆ ಬಿಲ್ವಪತ್ರೆ ಮರಗಳಿರುವುದು ಸಾಮಾನ್ಯ. ಬಿಲ್ವಪತ್ರೆ ಮರಕ್ಕೆ ಔಷಧಿ ಗುಣಗಳು ಇರುತ್ತದೆ. ಸಮುದ್ರ ಮಂಥನದಲ್ಲಿ ಶಿವ ವಿಷವನ್ನು ಕುಡಿಯುತ್ತಾನೆ. ವಿಷ ಕುಡಿದ ಶಿವನನ್ನು ರಾತ್ರೀಡೀ ಎಚ್ಚರವಾಗಿರಿಸಲು, ತಂಪಾಗಿಡಲು ಈ ಬಿಲ್ವಪತ್ರೆ ಎಲೆಗಳನ್ನು ಉಪಯೋಗಿಸುತ್ತಾರೆ. ಅಂದಿನಿಂದಲೂ ಕೂಡ ಬಿಲ್ವಪತ್ರೆ ಮರ ಈಶ್ವರನಿಗೆ ತುಂಬಾ ಶ್ರೇಷ್ಠವಾದದ್ದು. ಬಿಲ್ವಪತ್ರೆ ವನರಾಶಿಗೆ ಹೊಂದಿಕೊಂಡಂತೆ ಕಲ್ಲು ಮುರುಡೇಶ್ವರ ದೇವಸ್ಥಾನವಿದೆ. ಮರಳು ಸಿದ್ದೇಶ್ವರ ತಪಸ್ವಿ ಶಿವಪೂಜೆ ಮಾಡದ ದೇವಸ್ಥಾನವೆಂಬ ಇತಿಹಾಸವೂ ಇದೆ. ಈ ಕಲ್ಲುಮುರುಡೇಶ್ವರ ಸ್ವಾಮಿಗೆ ಈ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ ಭಕ್ತರು ಇಷ್ಷಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

 ಮರುಳು ಸಿದ್ದೇಶ್ವರ ಎಂಬ ತಪಸ್ವಿ ಶಿವನನ್ನು ಪೂಜೆ ಮಾಡಲು ಈ ಬಿಲ್ವಪತ್ರೆ ಎಲೆಗಳನ್ನೇ ಅರ್ಪಿಸುತ್ತಿದ್ದ. ಆ ತಪಸ್ವಿ ಅಲ್ಲಿಯೇ ಐಕ್ಯವಾಗಿದ್ದು ಇಲ್ಲಿಗೆ ಬರುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಕಲ್ಲುಮುರುಡೇಶ್ವರ ಸ್ವಾಮಿ ಈಡೇರಿಸುತ್ತದೆ ಎನ್ನು ನಂಬಿಕೆ ಭಕ್ತರಲ್ಲಿ ಇದೆ. ಒಟ್ಟಾರೆಯಾಗಿ ಬಿಲ್ವಪತ್ರೆ ವನ ತಪಸ್ಸಿನಿಂದ ಬೆಳೆದಿದೆ ಎನ್ನುವ ನಂಬಿಕೆ ಸ್ಥಳೀಯರದ್ದು, ಭಕ್ತರ ಸಕಲ ಇಷ್ಟಾರ್ಥಗಳನ್ನು ಕಲ್ಲುಮುರುಡೇಶ್ವರ ಸ್ವಾಮಿ ಈಡೇರಿಸುತ್ತೇದೆ ಎನ್ನುವ ನಂಭಿಕೆ ಭಕ್ತರಲ್ಲಿ ಇದೆ.

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News