ಕೋಮುಸೌಹಾರ್ದತೆಗೆ ಸಾಕ್ಷಿಯಾದ ಕೇರಳದ ಪದನ್ನ ದೇವಾಲಯದ ಆವರಣದಲ್ಲಿ ಜಮಾತೆ ಇಸ್ಲಾಮಿ ಸಮಾವೇಶ

Update: 2017-02-24 15:26 GMT

ತಿರುವನಂತಪುರ,ಫೆ.24: ಕೇರಳದ ಕಾಸರಗೋಡು ಜಿಲ್ಲೆಯ ಪದನ್ನ ಗ್ರಾಮವು ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಲ್ಲಿನ ದೇವಾಲಯವೊಂದು, ಮುಸ್ಲಿಂ ಸಂಘಟನೆಯಾದ ಜಮಾತೆ ಇಸ್ಲಾಮಿಗೆ ಜಿಲ್ಲಾ ಸಮಾವೇಶವನ್ನು ನಡೆಸಲು ದೇವಾಲಯವು ತನ್ನ ಜಮೀನನ್ನೇ ನೀಡುವ ಮೂಲಕ ಮತೀಯ ಸಾಮರಸ್ಯವನ್ನು ಮೆರೆದಿದೆ.

 ಜಮಾತೆ ಇಸ್ಲಾಮಿನ ಜಿಲ್ಲಾ ಸಮಾವೇಶವನ್ನು ಇಲ್ಲಿನ ಮುಂಡಿಯವಲ್ಲಪ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸುಮಾರು 5 ಸಾವಿರ ಪ್ರತಿನಿಧಿಗಳು ಆಗಮಿಸಲಿರುವುದರಿಂದ ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆಯಾಗಿತ್ತು. ಹೀಗಾಗಿ ಸಂಘಟಕರು ದೇವಾಲಯದ ಸಮಿತಿಯನ್ನು ಸಂಪರ್ಕಿಸಿದರೆಂದು ಜಮಾತೆ ಇಸ್ಲಾಮಿಯ ಪದನ್ನ ಪ್ರದೇಶದ ಅಧ್ಯಕ್ಷ ಬಶೀರ್ ಶಿವಪುರಂ ಹೇಳುತ್ತಾರೆ.

ಈ ಬಗ್ಗೆ ತುರ್ತು ಸಭೆ ನಡೆಸಿದ ದೇಗುಲದ ಆಡಳಿತ ಮಂಡಳಿಯು, ಸಮಾವೇಶಕ್ಕೆ ದೇಗುಲದ ಆವರಣದಲ್ಲಿಯೇ ಜಮೀನು ನೀಡಲು ನಿರ್ಧರಿಸಿತು. ಸಮಾವೇಶಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೇವಾಲಯದ ಅಧಿಕಾರಿಗಳು ಆವರಣಗೋಡೆ ಹಾಗೂ ಸಮಾವೇಶದ ಜಾಗದ ನಡುವೆ ಇರುವ ಗೋಡೆಯನ್ನು ತೆರವುಗೊಳಿಸಲು ಸಮ್ಮತಿಸಿದರು.

 ದೇವಾಲಯದ ನಿವೇಶವನ್ನು ಸಮಾವೇಶಕ್ಕಾಗಿ ಸುಮಾರು ಒಂದು ವಾರದವರೆಗೆ ಉಪಯೋಗಿಸಲಾಗಿತ್ತು. ದೇಗುಲದ ಮುಂಭಾಗದಲ್ಲಿಯೇ ವೇದಿಕೆಯನ್ನು ಸ್ಥಾಪಿಸಲಾಯಿತು ಹಾಗೂ ದೇವಾಲಯದ ಆವರಣದಲ್ಲಿ ಒಂದುವಾರದವರೆಗೆ ವಸ್ತುಪ್ರದರ್ಶನ ಕೂಡಾ ನಡೆಯಿತು ಎಂದು ಬಶೀರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News