ಬಿಎಸ್‌ ಎಸ್‌ಸಿ ಅಧ್ಯಕ್ಷರ ಆರೆಸ್ಟ್‌

Update: 2017-02-25 05:04 GMT

ಪಾಟ್ನಾ, ಫೆ.25:ನೇಮಕಾತಿ ಹಗರಣಕ್ಕೆ ಸಂಬಂಧಿಸಿ  ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗದ (ಬಿಎಸ್‌ ಎಸ್‌ಸಿ) ಅಧ್ಯಕ್ಷ ಹಾಗೂ 1987ಐಎಎಸ್ ಬ್ಯಾಚ್ ಅಧಿಕಾರಿ ಸುಧೀರ‍್ ಕುಮಾರ್ ನ್ನು ಶುಕ್ರವಾರ ಬಂಧಿಸಲಾಗಿದ್ದು,ಅವರನ್ನು ಬಿಹಾರದ  ಬೇವೂರ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸುಧೀರ್ ಕುಮಾರ್ ಜೊತೆಗೆ ಅವರ ಸಹೋದರ ಅವಾದೇಶ್‌ ಕುಮಾರ್ ,ಸಹೋದರಿ  ಮಗ ಆಶೀಶ್‌ ಕುಮಾರ್,  ಅವಾದೇಶ್ ಪತ್ನಿ ಮಂಜುದೇವಿ ಅವರನ್ನೂ ಬಂಧಿಸಲಾಗಿದೆ.
ಅವಾದೇಶ್‌ ಪಾಟ್ನಾ ವುಮೆನ್ಸ್ ಕಾಲೇಜೊಂದರಲ್ಲಿ ಭೂಗರ್ಭಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ.
ಆಶೀಶ್‌ ಕುಮಾರ‍್ ಸ್ನೇಹಿತ ಸಾಜಿದ್‌ ಅಹ್ಮದ್‌  ಮತ್ತು ಬಿಎಸ್‌ಎಸ್‌ಸಿ ಐಟಿ ಮ್ಯಾನೇಜರ್‌ ನಿಧಿ ಪ್ರತಾಪ್‌ ಸಿಂಗ್‌ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಶೇಷ ತನಿಖಾ ತಂಡದ ಎಸ್‌ಎಸ್ಪಿ ಮಂಜು ಮಹಾರಾಜ್‌ ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಬಿಹಾರದಲ್ಲಿ   ಗುಮಾಸ್ತ ಹುದ್ದೆಗಳಿಗೆ  ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧಿ ಮುಖ್ಯ ಮಂತ್ರಿ ನಿತೀಶ್ ಕುಮಾರ್  ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ, ಆದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News