ಮದುವೆ ಚಪ್ಪರಕ್ಕೆ ಬೆಂಕಿಹಚ್ಚಿ, ಬಾಂಬಿಟ್ಟ ದುಷ್ಕರ್ಮಿಗಳು !

Update: 2017-02-25 09:38 GMT

ಕೊಟ್ಟಿಯಂ, ಫೆ. 25: ಮದುವೆ ಚಪ್ಪರಕ್ಕೆ ಬೆಂಕಿ ಹಚ್ಚಿ ನಂತರ ಬಾಂಬು ಇಟ್ಟು ಅದನ್ನು ಧ್ವಂಸ ಮಾಡಲು ದುಷ್ಕರ್ಮಿಗಳು ನಡೆಸಿದ ಪ್ರಯತ್ನ ಕೂದಲೆಳೆ ಅಂತರದಲ್ಲಿ ವಿಫಲವಾಗಿದೆ. ಘಟನೆಯ ಸ್ಥಳದಿಂದ ಎರಡು ನಾಡಬಾಂಬುಗಳನ್ನು ಪತ್ತೆಹಚ್ಚಲಾಗಿದೆ. ಬಾಂಬ್ ಸ್ಕ್ವಾಡ್, ಪೊಲೀಸರು ಸೇರಿ ಬಾಂಬುಗಳನ್ನು ನಿಷ್ಕ್ರಿಯ ಗೊಳಿಸಿದ್ದಾರೆ. ಮೈಲಾಪ್ಪೂರ್ ಎ.ಕೆ.ಎಂ. ಹೈಯರ್ ಸೆಕಂಡರಿ ಶಾಲೆ ಸಮೀಪದ ಮೇಲೆವಿಳ ತೆಕ್ಕತ್ತಿಲ್ ಶಾಹ್ನಾದ ಮಂಝಿಲ್‌ನ ನಾಸರ್‌ರ ಮನೆಯಲ್ಲಿ ನಾಡನ್ನೇ ಆತಂಕಗೊಳಿಸಿದ ಘಟನೆ ನಡೆದಿದೆ. ಕಳೆದ 20 ತಾರೀಕಿಗೆ ನಾಸರ್‌ರ ಪುತ್ರಿಯ ವಿವಾಹ ನಡೆದಿತ್ತು.

ಶುಕ್ರವಾರ ಬೆಳಗ್ಗೆ ಒಂದೂವರೆಗಂಟೆಗೆ ಮನೆಯ ಮುಂದಿರಿಸಲಾಗಿದ್ದ ಸ್ಕೂಟರ್‌ಗೂ ಮನೆಅಂಗಳದಲ್ಲಿದ್ದ ಮದುವೆ ಚಪ್ಪರಕ್ಕೂ ಬೆಂಕಿ ಹಚ್ಚಿ ಧ್ವಂಸಗೈಯ್ಯಲು ಪ್ರಯತ್ನಿಸಲಾಗಿದೆ. ಬೆಂಕಿ ಉರಿಯುವುದು ಕಂಡು ಮನೆಯವರು ಎಚ್ಚರಗೊಂಡು ಬೆಂಕಿಯನ್ನುಆರಿಸಿದ್ದಾರೆ. ಸ್ಕೂಟರ್ ಅಂಶಿಕವಾಗಿ ಸುಟ್ಟುಹೋಗಿದೆ. ಚಪ್ಪರದ ಒಂದು ಭಾಗದಲ್ಲಿ ಬೆಂಕಿ ಹರಡಿತ್ತು. ಪೆಟ್ರೋಲ್‌ನಲ್ಲಿ ಅದ್ದಿದ ಬಟ್ಟೆಯನ್ನು ಸ್ಕೂಟರ್‌ನ ಮೇಲೆ ಹಾಕಿದ ಬಳಿಕ ಬೆಂಕಿ ಉರಿಯತೊಡಗಿತ್ತು ಎಂದು ಅಂದಾಜಿಸಲಾಗಿದೆ. ಮನೆಯವರು ದೂರು ನೀಡಿದ್ದು ಪೊಲೀಸರು ಸ್ಥಳ ತಪಾಸಣೆ ನಡೆಸಿದ ಪೊಲೀಸರು ಬಾಂಬ್‌ನ್ನು ಪತ್ತೆಹಚ್ಚಿದ್ದರು. ನಂತರ ಬಾಂಬ್ ಸ್ಕ್ವಾಡನ್ನು ಕರೆಯಿಸಿ ಬಾಂಬನ್ನು ನಿಷ್ಕ್ರಿಯ ಗೊಳಿಸಲಾಯಿತು. ಪೊಲೀಸರು ಕೇಸುದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News