ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಪುತ್ರನನ್ನು 4 ಗಂಟೆ ತಡೆಹಿಡಿದ ಪ್ಲೊರಿಡಾ ವಿಮಾನನಿಲ್ದಾಣದ ಅಧಿಕಾರಿಗಳು

Update: 2017-02-25 13:00 GMT

ಪ್ಲೊರಿಡಾ, ಫೆ. 25: ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಯ ಪುತ್ರನನ್ನು ಅಮೆರಿಕದ ಪ್ಲೊರಿಡಾ ವಿಮಾನನಿಲ್ದಾಣದಲ್ಲಿ ತಡೆಹಿಡಿದು ಪ್ರಶ್ನಿಸಲಾಗಿದೆ. ಪ್ಲೊರಿಡಾದ ಲೊಡರ್‌ಡೆಲ್-ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿ ಜೂನಿಯರ್‌ರನ್ನು ನಾಲ್ಕು ಗಂಟೆಗಳಕಾಲ ತಡೆಹಿಡಿದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಮುಹಮ್ಮದ್ ಅಲಿಯ ಮೊದಲ ಪತ್ನಿ ಖಾಲಿಲಾ ಕಮಾಚ್ಚೊ ಅಲಿಯ ಜೊತೆ ಜಮೈಕದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮರಳಿ ಹೋಗುತ್ತಿದ್ದಾಗ ಮುಸ್ಲಿಂ ಹೆಸರಿದ್ದುದನ್ನು ಪ್ರಶ್ನಿಸಿ ಜೂನಿಯರ್ ಮುಹಮ್ಮದ್ ಅಲಿಯನ್ನು ತಡೆಹಿಡಿಯಲಾಗಿತ್ತು. ಫೆಬ್ರವರಿ ಏಳಕ್ಕೆ ಘಟನೆ ನಡೆದಿದೆ ಎಂದು ಯುಎಸ್‌ಎ ಟುಡೆ ವರದಿ ಮಾಡಿದೆ.

 ಕೊನೆಗೆ ಕಮಾಚ್ಚೊ ಅಲಿ ತನ್ನ ಮಾಜಿ ಪತಿಯೊಂದಿಗಿನ ಫೋಟೊ ತೋರಿಸಿದ ಬಳಿಕ ಅಧಿಕಾರಿಗಳು ಜೂನಿಯರ್ ಅಲಿಯನ್ನು ಬಿಟ್ಟಿದ್ದಾರೆ. ಅವರನ್ನು ನಿರಂತರ ಎರಡು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು. ನಿಮಗೆ ಈ ಹೆಸರು ಎಲ್ಲಿಂದ ಸಿಕ್ಕಿತು. ನೀವು ಮುಸ್ಲಿಮರಾಗಿದ್ದೀರಾ ಎಂದು ಅಧಿಕಾರಿಗಳು ಜೂನಿಯರ್ ಮುಹಮ್ಮದ್ ಅಲಿಯನ್ನು ಪದೇ ಪದೇ ಪ್ರಶ್ನಿಸಿದ್ದಾರೆ. ತಾನು ಮುಸ್ಲಿಮ್ ಆಗಿದ್ದೇನೆ ಎಂದು ಹೇಳಿದಾಗ ಎಲ್ಲಿ ಹುಟ್ಟಿದ್ದೀರಿ ಮತ್ತು ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ.

 ಅಧಿಕಾರಿಗಳ ವರ್ತನೆಯನ್ನು ಪ್ರಶ್ನಿಸಿ ಅಲಿಯ ಕುಟುಂಬ ಅಮೆರಿಕದ ಫೆಡರಲ್ ಕೋರ್ಟಿಗೆ ದೂರು ನೀಡಲಿದೆ ಎಂದು ಇವರ ಕುಟುಂಬ ಮಿತ್ರ ಕ್ರಿಸ್ ಮಾನ್ಸಿನಿ ಹೇಳಿ ದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News