ನಿಯಂತ್ರಣ ಸುಧಾರಣೆ ಆದೇಶಕ್ಕೆ ಟ್ರಂಪ್ ಸಹಿ

Update: 2017-02-25 14:33 GMT

ವಾಶಿಂಗ್ಟನ್, ಫೆ. 25: ಫೆಡರಲ್ ಸಂಸ್ಥೆಗಳಲ್ಲಿ ‘ನಿಯಂತ್ರಣ ಸುಧಾರಕ’ ಕಾರ್ಯಪಡೆಗಳು ಮತ್ತು ಅಧಿಕಾರಿಗಳನ್ನು ನೇಮಿಸುವ ಆದೇಶವೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. ಇದು ಕೆಂಪು ಪಟ್ಟಿ (ಅಧಿಕಾರಶಾಹಿ)ಯನ್ನು ಕಡಿಮೆಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂಬುದಾಗಿ ಭಾವಿಸಲಾಗಿದೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಡೋ ಕೆಮಿಕಲ್ ಕೊ, ಲಾಕ್‌ಹೀಡ್ ಮಾರ್ಟಿನ್ ಕಾರ್ಪ್ ಮತ್ತು ಯು.ಎಸ್. ಸ್ಟೀಲ್ ಕಾರ್ಪ್ ಮುಂತಾದ ಕಂಪೆನಿಗಳ ಸಿಇಒಗಳು ಟ್ರಂಪ್‌ರ ಹಿಂದೆ ನಿಂತಿದ್ದರು.

ವಿವಿಧ ಸರಕಾರಿ ಸಂಸ್ಥೆಗಳಲ್ಲಿರುವ ಎಲ್ಲ ನಿಯಂತ್ರಣಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಅವುಗಳಲ್ಲಿ ತಂಡಗಳನ್ನು ಸ್ಥಾಪಿಸುವ ಕಾರ್ಯಪಡೆಗಳನ್ನು ನೇಮಿಸಲು ಈ ಆದೇಶ ಅನುವು ಮಾಡಿಕೊಡಲಿದೆ. ಅಮೆರಿಕದ ಆರ್ಥಿಕತೆಗೆ ಹೊರೆಯಾಗುವ ನಿಯಂತ್ರಣಗಳ ಮೇಲೆ ಈ ಕಾರ್ಯಪಡೆಗಳು ಗಮನಹರಿಸಲಿವೆ ಹಾಗೂ ಅವುಗಳನ್ನು ಪರಿಶೀಲಿಸಲು 60 ದಿನಗಳಲ್ಲಿ ನಿಯಂತ್ರಣ ಸುಧಾರಕ ಅಧಿಕಾರಿಗಳನ್ನು ನೇಮಿಸುತ್ತವೆ. ಕಾರ್ಯಪಡೆಗಳು ಪ್ರಗತಿಯ ಬಗ್ಗೆ 90 ದಿನಗಳಲ್ಲಿ ವರದಿಗಳನ್ನು ಸಲ್ಲಿಸಬೇಕಾಗುತ್ತದೆ.

‘‘ಅತಿಯಾದ ನಿಯಂತ್ರಣಗಳು ಕೆಲಸಗಳನ್ನು ಆಹುತಿ ತೆಗೆದುಕೊಳ್ಳುತ್ತಿವೆ ಹಾಗೂ ಕಂಪೆನಿಗಳನ್ನು ಹಿಂದೆಂದು ಇರದ ರೀತಿಯಲ್ಲಿ ನಮ್ಮ ದೇಶದಿಂದ ಹೊರಗೆ ಅಟ್ಟುತ್ತವೆ’’ ಎಂದು ಆದೇಶಕ್ಕೆ ಸಹಿ ಹಾಕುವ ಮುಂಚೆ ಟ್ರಂಪ್ ಹೇಳಿದರು.

‘‘ಪ್ರತಿಯೊಂದು ನಿಯಂತ್ರಣವು ಸರಳ ಪರೀಕ್ಷೆಯೊಂದರಲ್ಲಿ ಉತ್ತೀರ್ಣಗೊಳ್ಳಬೇಕು. ಅವು ಅಮೆರಿಕನ್ ನೌಕರರು ಅಥವಾ ಗ್ರಾಹಕರ ಬದುಕನ್ನು ಉತ್ತಮಗೊಳಿಸುತ್ತವೇಯೇ ಅಥವಾ ಸುರಕ್ಷಿತಗೊಳಿಸುತ್ತವೆಯೇ ಎನ್ನುವುದು ನಿರ್ಧಾರವಾಗಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News