ಅಮೆರಿಕದ ಇತಿಹಾಸದಲ್ಲಿಯೇ ಬಲಿಷ್ಠ ಸೇನೆ ನಿರ್ಮಿಸುವೆ: ಟ್ರಂಪ್

Update: 2017-02-25 14:35 GMT

ವಾಶಿಂಗ್ಟನ್, ಫೆ. 25: ಅಮೆರಿಕದ ಇತಿಹಾಸದಲ್ಲಿಯೇ ಬೃಹತ್ ಸೇನೆಯೊಂದನ್ನು ನಿರ್ಮಿಸಲು ಬೃಹತ್ ಮೊತ್ತದ ಬಜೆಟ್ ಒದಗಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಭರವಸೆ ನೀಡಿದ್ದಾರೆ.

ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ (ಸಿಪಿಎಸಿ)ನ ಸಭೆಯಲ್ಲಿ ಮಾತನಾಡಿದ ಅವರು, ತನ್ನ ಕನ್ಸರ್ವೇಟಿವ್ ಕಾರ್ಯಕರ್ತರನ್ನು ಖುಷಿಪಡಿಸಲು ಚುನಾವಣಾ ಪ್ರಚಾರ ಶೈಲಿಯ ಭರ್ಜರಿ ಭಾಷಣವೊಂದನ್ನು ಮಾಡಿದರು.

ಅನಿರೀಕ್ಷಿತ ಎಂಬಂತೆ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ್ದ ಅವರಿಗೆ ತನ್ನ ‘ಅಮೆರಿಕ ಮೊದಲು’ ನೀತಿಗಳ ಬಗ್ಗೆ ಹೇಳಿಕೊಳ್ಳಲು ಮೊದಲ ವೇದಿಕೆ ಒದಗಿಸಿದ್ದು ಇದೇ ಸಿಪಿಎಸಿ.

ಮಂಗಳವಾರ ಅವರು ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮುನ್ನ ಅಮೆರಿಕದ ಸೇನೆಯನ್ನು ಬಲಗೊಳಿಸುವ ಯೋಜನೆಗಳು ಹಾಗೂ ತೆರಿಗೆ ಸುಧಾರಣೆ ಮತ್ತು ನಿಯಂತ್ರಣ ಹೇರಿಕೆ ಮುಂತಾದ ಇತರ ಉಪಕ್ರಮಗಳ ಬಗ್ಗೆ ಟ್ರಂಪ್ ಇಲ್ಲಿ ಹಲವು ಸೂಚನೆಗಳನ್ನು ನೀಡಿದರು.

ಅಮೆರಿಕ ಸೇನೆಯು ಈಗಾಗಲೇ ವಿಶ್ವದ ಅತ್ಯಂತ ಬಲಿಷ್ಠ ಸೇನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News