ಬಾಹ್ಯಾಕಾಶದಲ್ಲಿ ಜೀವಿಗಳ ಬೇಟೆಗೆ ಹೊರಟಿರುವ ನಾಸಾದ 8 ಬಿಲಿಯ ಡಾಲರ್ ವೆಚ್ಚದ ಟೆಲಿಸ್ಕೋಪ್

Update: 2017-02-25 14:40 GMT

ವಾಶಿಂಗ್ಟನ್, ಫೆ. 25: ಜಗತ್ತಿನ ಅತ್ಯಂತ ದುಬಾರಿ ಟೆಲಿಸ್ಕೋಪನ್ನು ಈಗ ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಗ್ರೀನ್‌ಬೆಲ್ಟ್‌ನಲ್ಲಿರುವ ‘ನಾಸಾ’ ಗೊಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ’ದ ಸುರಕ್ಷಿತ ಡೇರೆಯಲ್ಲಿ ಇರಿಸಲಾಗಿದೆ.

ಭಾರೀ ವಿಳಂಬಿತ ಟೆಲಿಸ್ಕೋಪ್ ನಿರ್ಮಾಣಕ್ಕೆ ನಾಸಾ ಮಾಡಿರುವ ವೆಚ್ಚ ಬರೋಬ್ಬರಿ 8 ಬಿಲಿಯ ಡಾಲರ್ (ಸುಮಾರು 53,310 ಕೋಟಿ ರೂಪಾಯಿ). ಅದು ಇನ್ನು ಎರಡು ವರ್ಷಗಳಲ್ಲಿ ಭೂಮಿಯಿಂದ ಸುಮಾರು 10 ಲಕ್ಷ ಮೈಲಿ (ಸುಮಾರು 16 ಲಕ್ಷ ಕಿಲೋಮೀಟರ್) ದೂರದಲ್ಲಿರಲಿದೆ.

ಎಲ್ಲವೂ ಯೋಜನೆಯಂತೆ ಸಾಗಿದರೆ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಜಗತ್ತಿನ ಅತ್ಯಂತ ಹಳೆಯ ಬೆಳಕನ್ನು ಸಂಗ್ರಹಿಸಲಿದೆ. ಬೃಹತ್ ಸ್ಫೋಟ (ಬಿಗ್ ಬ್ಯಾಂಗ್) ನಡೆದ ಬಳಿಕ ಆಕಾಶಗಂಗೆ (ಗೆಲಾಕ್ಸಿ)ಗಳು ರೂಪುಗೊಳ್ಳುತ್ತಿರುವಾಗ ಹಾಗೂ ಪ್ರಥಮ ನಕ್ಷತ್ರಗಳು ಬೆಳಗಿದಾಗ ಹೊರಟ ಬೆಳಕು ಅದು.

ಆಕಾಶಗಂಗೆಗಳ ಕೇಂದ್ರದಲ್ಲಿ ಸುಳಿದಾಡುತ್ತಿರುವ ಕಪ್ಪುಕುಳಿಗಳ ಬಗ್ಗೆ ಅದು ಅಧ್ಯಯನ ನಡೆಸಲಿದೆ. ಅನಂತ ಆಕಾಶದ ನಕ್ಷತ್ರಗಳ ಸುತ್ತ ತಿರುಗುತ್ತಿರುವ ಗ್ರಹಗಳಿಂದ ಬೆಳಕನ್ನು ಪಡೆದು ಪರಿಶೀಲನೆ ನಡೆಸಲಿದೆ ಹಾಗೂ ಜೀವಿಗಳ ಅಸ್ತಿತ್ವ ಇರಬಹುದಾದ ಜಗತ್ತುಗಳ ವಾತಾವರಣದ ಶೋಧ ನಡೆಸಲಿದೆ.
ಅದರ ಸುದೀರ್ಘ ಉಡಾವಣೆ ಪ್ರಕ್ರಿಯೆ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News