ಚೀನಾ ಹೊಟೇಲ್‌ನಲ್ಲಿ ಬೆಂಕಿ: ಕನಿಷ್ಠ 3 ಸಾವು
Update: 2017-02-25 20:40 IST
ನನ್‌ಚಾಂಗ್ (ಚೀನಾ), ಫೆ. 25: ಚೀನಾದ ನನ್‌ಚಾಂಗ್ ನಗರದ ವಿಲಾಸಿ ಹೊಟೇಲೊಂದರಲ್ಲಿ ಶನಿವಾರ ಬೆಳಗ್ಗೆ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸರಕಾರಿ ಮಾಧ್ಯಮ ವರದಿ ಮಾಡಿದೆ.
ಅಗ್ನಿಶಾಮಕ ಸಿಬ್ಬಂದಿ ಹೊಟೇಲ್ ಕಟ್ಟಡವನ್ನು ಸುತ್ತುವರಿದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.