ರಾಹುಲ್ ಪ್ರಬುದ್ಧ ನಾಯಕ: ಶೀಲಾ ಸ್ಪಷ್ಟನೆ

Update: 2017-02-25 18:01 GMT

ಹೊಸದಿಲ್ಲಿ, ಫೆ.25: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕೀಯದಲ್ಲಿ ಇನ್ನೂ ಅಪ್ರಬುದ್ಥರಾಗಿದ್ದಾರೆಂದು ಶುಕ್ರವಾರ ತಾನು ವ್ಯಕ್ತಪಡಿಸಿದ ಅನಿಸಿಕೆಗೆ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಇಂದು ಸ್ಪಷ್ಟೀಕರಣ ನೀಡಿದ್ದು, ಪ್ರಬುದ್ಧ ನಾಯಕನಿಗಿರುವಂತಹ ಸಂವೇದನಾಶೀಲತೆಯನ್ನು ಆತ ಹೊಂದಿದ್ದಾರೆಂದು ಪ್ರಶಂಸಿಸಿದ್ದಾರೆ.

 ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಶುಕ್ರವಾರ ಪ್ರಕಟವಾದ ಸಂದರ್ಶನವೊಂದರಲ್ಲಿ, ರಾಹುಲ್ ಈಗಲೂ ಅಪ್ರಬುದ್ಧರಾಗಿದ್ದಾರೆ. ಅವರ ವಯಸ್ಸು ಅವರನ್ನು ಪ್ರಬುದ್ಧರನ್ನಾಗಿಸಲು ಅವಕಾಶ ನೀಡುತ್ತಿಲ್ಲ’’ ಎಂದು ಹೇಳಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಮುಜುಗರವನ್ನುಂಟು ಮಾಡಿತ್ತು.

 ಶೀಲಾ ದೀಕ್ಷಿತ್ ಅವರ ಶುಕ್ರವಾರದ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ‘‘ ಅಪ್ರಬುದ್ಧ ರಾಹುಲ್‌ರನ್ನು ಉತ್ತರಪ್ರದೇಶಕ್ಕೆ ಕಳುಹಿಸುವ ಬದಲು ಮನೆಯಲ್ಲಿ ಕೂರಿಸಬೇಕು’’ ಎಂದು ಲೇವಡಿ ಮಾಡಿದ್ದರು. ಆದಾಗ್ಯೂ, ದೀಕ್ಷಿತ್ ಶುಕ್ರವಾರ ತನ್ನ ಹೇಳಿಕೆಯಿಂದ ಯುಟರ್ನ್ ಪಡೆದುಕೊಂಡಿದ್ದು, ನನ್ನ ಮಾತುಗಳನ್ನು ತಿರುಚದಿರಿ ಎಂದು ಮನವಿ ಮಾಡಿದ್ದಾರೆ.‘‘ರಾಹುಲ್ ಅವರಿಗೆ ಪ್ರಬುದ್ಧ ನಾಯಕನೊಬ್ಬನ ಸಂವೇದನೆ ಹಾಗೂ ಕಾಳಜಿಯಿದೆ. ಓರ್ವ ಯುವ, ಧೈರ್ಯಶಾಲಿ ಹಾಗೂ ಅವಿಶ್ರಾಂತ ಚಟುವಟಿಕೆಯ ನಾಯಕನಂತೆ ಅವರು ಮಾತನಾಡುತ್ತಿದ್ದಾರೆ ಎಂದು ದೀಕ್ಷಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News