ಸುಸೂತ್ರವಾಗಿ ನಡೆದ ಪ್ರಥಮ ಪಿಯುಸಿ ಪರೀಕ್ಷೆ

Update: 2017-02-25 18:42 GMT

ಪುತ್ತೂರು, ೆ.25: ಪಪೂ ಶಿಕ್ಷಣ ಮಂಡಳಿಯ ವತಿಯಿಂದ ಪ್ರಥಮ ಪಿಯುಸಿ ತರಗತಿಗಳಿಗೆ ಅಂತಿಮ ಪರೀಕ್ಷೆ ನಡೆಯುತ್ತಿದ್ದು, ಪುತ್ತೂರು ಬಂದ್‌ನ ನಡುವೆಯೂ ಶನಿವಾರ ವಿಜ್ಞಾನ ವಿಭಾಗದ ಗಣಿತಶಾಸ ಪರೀಕ್ಷೆ ಪುತ್ತೂರು ನೋಡಲ್ ಕೇಂದ್ರ ವ್ಯಾಪ್ತಿಯ ಎಲ್ಲ ಕಡೆ ಸುಸೂತ್ರವಾಗಿ ನಡೆದಿವೆ.

ಪುತ್ತೂರು ಕೊಂಬೆಟ್ಟುವಿನಲ್ಲಿರುವ ಸರಕಾರಿ ಪಪೂ ಕಾಲೇಜು ನೋಡೆಲ್ ಕೇಂದ್ರವಾಗಿದ್ದು, ಇದರ ವ್ಯಾಪ್ತಿಯಲ್ಲಿ ಬರುವ 14 ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೇವಲ 5 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಅವರು ದೀರ್ಘ ರಜೆಯಲ್ಲಿದ್ದರು ಎಂಬುದು ತಿಳಿದು ಬಂದಿದೆ ಎಂದು ಕೊಂಬೆಟ್ಟು ಪಪೂ ಕಾಲೇಜಿನ ಪ್ರಾಂಶುಪಾಲ ಜಯರಾಮ ಶೆಟ್ಟಿ ತಿಳಿಸಿದ್ದಾರೆ.

ಕೊಂಬೆಟ್ಟು ಕಾಲೇಜಿನಲ್ಲಿ ಎಲ್ಲ 107, ಬಪ್ಪಳಿಗೆ ಅಂಬಿಕಾ ಕಾಲೇಜಿನಲ್ಲಿ 168, ವಿವೇಕಾನಂದ ಕಾಲೇಜಿನಲ್ಲಿ 760ರಲ್ಲಿ 757, ಕಬಕ ಕಾಲೇಜಿನಲ್ಲಿ ಎಲ್ಲ 15, ಕುಂಬ್ರ ಕಾಲೇಜಿನಲ್ಲಿ ಎಲ್ಲ 28, ಬೆಟ್ಟಂಪಾಡಿ ಕಾಲೇಜಿನಲ್ಲಿ ಎಲ್ಲ 22, ಮುಕ್ರಂಪಾಡಿ ಮಹಿಳಾ ಕಾಲೇಜಿನಲ್ಲಿ ಎಲ್ಲ 5, ಬಿಳಿಯೂರು ಕಟ್ಟೆ ಕಾಲೇಜಿನಲ್ಲಿ ಎಲ್ಲ 7, ಕಾಣಿಯೂರು ಕಾಲೇಜಿನಲ್ಲಿ ಎಲ್ಲ 8, ನೆಲ್ಲಿಕಟ್ಟೆ ಅಂಬಿಕಾ ಕಾಲೇಜಿನ 228ರಲ್ಲಿ 226, ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಲ್ಲ 348, ಕೆಯ್ಯೂರು ಕಾಲೇಜಿನಲ್ಲಿ ಎಲ್ಲ 6, ಸವಣೂರು ಕಾಲೇಜಿನಲ್ಲಿ ಎಲ್ಲ 7, ಸವಣೂರು ವಿದ್ಯಾರಶ್ಮಿಯಲ್ಲಿ ಎಲ್ಲ 43 ಮಕ್ಕಳು ಪರೀಕ್ಷೆ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News