ಉಪ್ಪಿನಂಗಡಿ: ಹೋಬಳಿ ಮಟ್ಟದ ಜನಸಂಪರ್ಕ ಸಭೆ

Update: 2017-02-25 18:50 GMT

ಉಪ್ಪಿನಂಗಡಿ, ೆ.25: ಕೋಡಿಂಬಾಡಿ ಬಳಿಯ ಉಪ್ಪಿನಂಗಡಿ-ಪುತ್ತೂರು ರಸ್ತೆಯ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿದ್ದರೂ, ಅವುಗಳನ್ನು ತೆರವುಗೊಳಿಸದೆ ಅಪಾಯಕಾರಿಯಾಗಿ ತೋಡಿನ ಬದಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಶನಿವಾರ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ನಾಗರಿಕರಿಂದ ವ್ಯಕ್ತವಾಗಿದೆ.

ಪುತ್ತೂರು ಶಾಸಕಿ ಟಿ. ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆೆಯಲ್ಲಿ ನಾಗರಿಕರು ವಿಷಯ ಪ್ರಸ್ತಾಪಿಸಿದರು, ಕೋಡಿಂಬಾಡಿಯಲ್ಲಿ ರಸ್ತೆಯ ಒಂದು ಬದಿ ಯಥೇಚ್ಛವಾಗಿ ಸರಕಾರಿ ಸ್ಥಳವಿದೆ. ಅಲ್ಲಿ ಹಲವರು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದಕ್ಕೆ ಪಂಚಾಯತ್‌ನಿಂದ ಕಟ್ಟಡ ಸಂಖ್ಯೆಯನ್ನು ಕೂಡಾ ನೀಡಿಲ್ಲ. ಆದರೆ, ರಸ್ತೆ ವಿಸ್ತರಣೆಯ ಸಂದರ್ಭ ಇದರ ತೆರವಿಗೆ ಮುಂದಾಗದೆ ತೋಡಿನ ಬದಿಯಲ್ಲೇ ಕಾಮಗಾರಿ ನಡೆಸಲಾಗುತ್ತಿದೆ. ಇದು ಅಪಾಯಕಾರಿಯಾಗಿದ್ದು, ರಸ್ತೆಯ ಅಗಲ ಕೂಡಾ ಕಿರಿದಾಗಿದೆ. ಅಲ್ಲದೇ, ಪಾದಚಾರಿಗಳಿಗೆ ನಡೆದಾಡಲು ಸ್ಥಳ ಕೂಡಾ ಇಲ್ಲಿಲ್ಲ. ಬಸ್ ವೇ ನಿರ್ಮಾಣಕ್ಕೂ ಸ್ಥಳಾವಕಾಶವಿಲ್ಲ ಎಂದು ಆರೋಪಿಸಿದ ನಾಗರಿಕರು, ಇಲ್ಲಿನ ರಸ್ತೆ ಬದಿ ಸಾಕಷ್ಟು ಸರಕಾರಿ ಜಾಗವಿದ್ದರೂ, ಅವುಗಳನ್ನು ಸ್ವಾೀನಪಡಿಸಿ, ಅಗಲವಾದ ರಸ್ತೆ ನಿರ್ಮಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು.

ಈ ಸಂದಭರ್ ಪ್ರತಿಕ್ರಿಯಿಸಿದ ಶಾಸಕಿ, ರಸ್ತೆ ಅಗಲೀಕರಣ ಕಾಮಗಾರಿ ನಿಯಮಬದ್ಧವಾಗಿ ನಡೆಯಲಿ. ಸರಕಾರಿ ಭೂಮಿ ಸ್ವಾೀನದ ಅಗತ್ಯ ಕಂಡು ಬಂದಲ್ಲಿ ಎಷ್ಟು ಭೂಮಿ ಕಾಮಗಾರಿಗೆ ಅಗತ್ಯವಿದೆಯೋ ಅಷ್ಟು ಭೂಮಿಯನ್ನು ಆ ಭಾಗದ ಎಲ್ಲಾ ಒತ್ತುವರಿದಾರರಿಂದ ಮುಕ್ತಗೊಳಿಸಿ ಕಾಮಗಾರಿಗೆ ಬಳಸಿ ಎಂದು ನಿರ್ದೇಶನ ನೀಡಿದರಲ್ಲದೆ, ಇಂದೇ ತಹಶೀಲ್ದಾರ್‌ರವರು ಸ್ಥಳಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಉಪ್ಪಿನಂಗಡಿ ಸರಕಾರಿ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದು ಕಳಪೆಯಾಗಿರುವ ಬಗ್ಗೆ ಸಭೆಯಲ್ಲಿ ಆರೋಪ ವ್ಯಕ್ತವಾಯಿತು. ಈ ಬಗ್ಗೆ ಪರಿಶೀಲನೆ ನಡೆಸಲು ಆರೋಗ್ಯ ಇಲಾಖಾ ಇಂಜಿನಿಯರಿಂಗ್ ವಿಭಾಗಕ್ಕೆ ಶಾಸಕಿ ತಿಳಿಸಿದರು.

ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯಾಕಾರಿಗಳಿಗೆ ಶಾಸಕಿ ಸೂಚಿಸಿದರು.

ಹಲವು ಗ್ರಾಮ ವ್ಯಾಪ್ತಿಯನ್ನೊಳಗೊಂಡ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿದರು.

ಇದಕ್ಕುತ್ತರಿಸಿದ ಶಾಸಕಿ, ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದು, ಮಾರ್ಚ್ ಮೊದಲ ವಾರದಲ್ಲಿಯೇ ಇಲ್ಲಿ ಖಾಯಂ ಎಸ್ಸೆಅವರನ್ನು ನೇಮಕಗೊಳಿಸುವ ಭರವಸೆ ಸಿಕ್ಕಿದೆ ಎಂದರು. ಗ್ರಾಮ ಕರಣಿಕ ಗೈರು: ಕುಪಿತಗೊಂಡ ಶಾಸಕಿ:

ಇಚ್ಲಂಪಾಡಿ ಗ್ರಾಮದ ವ್ಯಾಪ್ತಿಯ ಸಮಸ್ಯೆಯ ಬಗ್ಗೆ ನಾಗರಿಕರಿಂದ ವಿಚಾರ ಪ್ರಸ್ತಾಪವಾದಾಗ, ಉತ್ತರಿಸಲು ಅಲ್ಲಿನ ಗ್ರಾಮಕರಣಿಕರ ಗೈರು ಹಾಜರಾತಿಯಿಂದ ಕೋಪಗೊಂಡ ಶಾಸಕಿ ಇಲಾಖಾತ್ಮಕ ಕ್ರಮ ಜರಗಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ವಿವಿಧ ಯೋಜನೆಗಳ ಲಾನುಭವಿಗಳಿಗೆ ಹಕ್ಕು ಪತ್ರ, ಮಂಜೂರಾತಿ ಪತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ತಾಪಂ ಸದಸ್ಯರಾದ ಸುಜಾತಾ ಕೃಷ್ಣ ಆಚಾರ್ಯ, ವಲ್ಸಮ್ಮ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್, ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ರತಿ ಎಸ್. ನಾಯ್ಕ್ಕೆ, ಉಪಾಧ್ಯಕ್ಷ ಅಸ್ಗರ್ ಅಲಿ, ತಾಪಂ ಕಾರ್ಯನಿರ್ವಹಣಾಕಾರಿ ಜಗದೀಶ್, ಜಯಪ್ರಕಾಶ್ ಶೆಟ್ಟಿ ನಡುಮನೆ, ಯೊಗೀಶ್ ಸಾಮಾನಿ, ವಿಕ್ರಂ ಶೆಟ್ಟಿ ಅಂತರ, ಜಯಪ್ರಕಾಶ್ ಬದಿನಾರು, ಶಿವಪ್ರಸಾದ್ ರೈ, ಮುಹಮ್ಮದ್ ಕೆಂಪಿ, ಮುನೀರ್ ದಾವೂದ್, ಆದಂ ಕೊಪ್ಪಳ, ಮೊಯ್ದಿನ್ ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News