×
Ad

ಪಾಕ್: 600 ಶಂಕಿತ ಭಯೋತ್ಪಾದಕರ ಸೆರೆ

Update: 2017-02-26 21:41 IST

ಇಸ್ಲಾಮಾಬಾದ್, ಫೆ. 26: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಪಾಕಿಸ್ತಾನಿ ರೇಂಜರ್‌ಗಳು 200 ಶೋಧ ಕಾರ್ಯಾಚರಣೆಗಳನ್ನು ನಡೆಸಿ ನಾಲ್ವರು ಭಯೋತ್ಪಾದಕರನ್ನು ಕೊಂದಿದ್ದಾರೆ ಹಾಗೂ ಸುಮಾರು 600 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಭಯೋತ್ಪಾದಕರನ್ನು ನಿರ್ಮೂಲಗೊಳಿಸಲು ಪಾಕಿಸ್ತಾನಿ ಸೇನೆ ಕಳೆದ ವಾರ ದೇಶಾದ್ಯಂತ ‘ಆಪರೇಶನ್ ರಾಡ್-ಉಲ್-ಫಸಾದ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ದೇಶಾದ್ಯಂತ ಸರಣಿ ಆತ್ಮಹತ್ಯಾ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಸೇನೆಯು ಕಾರ್ಯಾಚರಣೆ ಆರಂಭಿಸಿತ್ತು. ಆತ್ಮಹತ್ಯಾ ದಾಳಿಗಳಲ್ಲಿ 125ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸಿಂಧ್‌ನಲ್ಲಿರುವ ಸೂಫಿ ಪ್ರಾರ್ಥನಾಲಯವೊಂದರ ಮೇಲೆ ನಡೆದ ದಾಳಿಯಲ್ಲಿ 91 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News