×
Ad

ವಶಪಡಿಸಿಕೊಳ್ಳಲಾದ ನಗದು, ಮದ್ಯದ ಪ್ರಮಾಣದಲ್ಲಿ ಭಾರೀ ಏರಿಕೆ ವಿಧಾನಸಭಾ ಚುನಾವಣೆಗಳು 2017

Update: 2017-02-26 23:46 IST

ಹೊಸದಿಲ್ಲಿ,ಫೆ.26: ಈ ಬಾರಿಯ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿರುವ ನಗದು ಹಣ,ಮದ್ಯ ಮತ್ತು ಮಾದಕ ದ್ರವ್ಯಗಳ ಪ್ರಮಾಣ ಈ ರಾಜ್ಯಗಳಲ್ಲಿಯ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಭಾರೀ ಹೆಚ್ಚಳ ಕಂಡಿದೆ.

 ಚುನಾವಣಾ ಆಯೋಗದಿಂದ ನೇಮಕಗೊಂಡ ಕಣ್ಗಾವಲು ತಂಡಗಳು ಇವುಗಳನ್ನು ವಶಪಡಿಸಿಕೊಂಡಿದ್ದು, ಶನಿವಾರದವರೆಗೆ ದಾಖಲಾಗಿರುವ ವಿವರಗಳಂತೆ ಉತ್ತರ ಪ್ರದೇಶದಲ್ಲಿ ದಾಖಲೆ ಪ್ರಮಾಣದ 115.70 ಕೋ.ರೂ.ನಗದು, 57.69 ಕೋ.ರೂ. ವೌಲ್ಯದ 20.29 ಲ.ಲೀ.ಮದ್ಯ ಮತ್ತು 7.91 ಕೋ.ರೂ.ವೌಲ್ಯದ 2,725 ಕೆ.ಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯದಲ್ಲಿ 36.29 ಕೋ.ರೂ.ನಗದು ಮತ್ತು 6.61 ಲ.ರೂ.ವೌಲ್ಯದ 3,703 ಲೀ.ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.ಉತ್ತರಾಖಂಡದಲ್ಲಿ 3.40 ಕೋ.ರೂ.ನಗದು,3.10 ಕೋ.ರೂ.ವೌಲ್ಯದ 1.01 ಲ.ಲೀ.ಮದ್ಯ ಮತ್ತು 37.88 ಲ.ರೂ.ವೌಲ್ಯದ 81 ಕೆ.ಜಿ.ಗೂ ಅಧಿಕ ಮಾದಕ ವಸ್ತುಗಳನ್ನು ವಶಪಡಿಕೊಳ್ಳಲಾಗಿದೆ.
 ಪಂಜಾಬಿನಲ್ಲಿ 58.02 ಕೋ.ರೂ.ನಗದು,13.36 ಕೋ.ರೂ.ವೌಲ್ಯದ 12.43 ಲ.ಲೀ.ಮದ್ಯ ಮತ್ತು 18.26 ಕೋ.ರೂ.ವೌಲ್ಯದ 2,598 ಕೆ.ಜಿ.ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋವಾದಲ್ಲಿ 2.24 ಕೋ.ರೂ.ನಗದು, 1.07 ಕೋ.ರೂ.ವೌಲ್ಯದ 76,000 ಲೀ. ಮದ್ಯವನ್ನು ವಶಪಡಿಕೊಳ್ಳಲಾಗಿದೆ.
ಉತ್ತರ ಪ್ರದೇಶದಂತೆ ಉತ್ತರಾಖಂಡ್, ಪಂಜಾಬ್ ಮತ್ತು ಗೋವಾಗಳಲ್ಲಿಯೂ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಇವುಗಳ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News