×
Ad

ವಿಶ್ವದ ಅತ್ಯಂತ ಫೆವರಿಟ್ ಮೊಬೈಲ್ ಮತ್ತೆ ಬಂದಿದೆ !

Update: 2017-02-27 11:33 IST

ಹೊಸದಿಲ್ಲಿ, ಫೆ.27: ಮರೆಯಲಾರದ ಫೋನ್ -ನೋಕಿಯಾ 3310 ಮತ್ತೆ ಬಂದಿದೆ. ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಆರಂಭದ ದಿನಗಳಲ್ಲಿ ಲಗ್ಗೆಯಿಟ್ಟು ಭಾರೀ ಜನಪ್ರಿಯತೆ ಪಡೆದಿದ್ದ ಈ ಫೋನ್ ತನ್ನ ಸರಳ ವಿನ್ಯಾಸದಿಂದ ಕೂಡಿದ್ದರೂ ಗಟ್ಟಿಮುಟ್ಟಾದ ಫೋನ್ ಎಂಬ ಖ್ಯಾತಿವೆತ್ತಿತ್ತು. ಇದೀಗ ಹೊಸ ಅವತಾರದಲ್ಲಿ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಬಾರ್ಸಿಲೊನಾದಲ್ಲಿ ರವಿವಾರ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಅನಾವರಣಗೊಂಡಿದೆ.

ಈ ಹೊಸ ನೋಕಿಯಾ 3310 ಫೋನನ್ನು ಫಿನ್‌ಲ್ಯಾಂಡ್ ಕಂಪೆನಿಯಾದ ಎಚ್‌ಎಂಡಿ ಗ್ಲೋಬಲ್ ಒವೈ ಬಿಡುಗಡೆಗೊಳಿಸಿದ್ದು ನೋಕಿಯಾ ಬ್ರ್ಯಾಂಡಿನ ಹಕ್ಕುಗಳನ್ನು ಅದು ಕಳೆದ ವರ್ಷ ಪಡೆದುಕೊಂಡಿತ್ತು.

ಈ ಹೊಸ ಫೋನಿನ ಫೀಚರ್ಸ್ ಈ ಕೆಳಗಿನಂತಿದೆ.

1. ಇದರ ಬೆಲೆ 49 ಯುರೋಸ್ ಅಂದರೆ ಸುಮಾರು ರೂ.3450 ಆಗಿದೆ. ಮೂಲ ಫೋನಿನಂತೆಯೇ ಈ ಫೋನಿನ ಬೆಲೆಯೂ ಜನಸಾಮಾನ್ಯರ ಕೈಗೆಟಕುವಂತಿದೆ.

2. ಕಲರ್ ಡಿಸ್ಲ್ಪೇ : ಈ ಫೋನಿಗೆ ಕಲರ್ ಡಿಸ್ಪ್ಲೇ ಇದ್ದು 2.4 ಇಂಚು ಸ್ಕ್ರೀನ್ ಮತ್ತು ಪಿಕ್ಸೆಲ್ ಡೆನ್ಸಿಟಿ 120 ಪಿಪಿಐ ಆಗಿದೆ.

3. ಸೆಲ್ಫೀಗಾಗಿ ಫ್ರಂಟ್ ಕ್ಯಾಮರಾ ಇಲ್ಲ: ಹಿಂದಿನ ಫೋನಿನಲ್ಲಿ ಕ್ಯಾಮರಾ ಇಲ್ಲದೇ ಇದ್ದಲ್ಲಿ ಅದರ ಹೊಸ ಅವತಾರದಲ್ಲಿ 2 ಎಂಪಿ ಬ್ಯಾಕ್ ಕೆಮೆರಾ ಇದ್ದು ಎಲ್‌ಇಡಿ ಫ್ಲ್ಯಾಶ್ ಕೂಡ ಲಭ್ಯವಿದೆ. ಆದರೆ ಸೆಲ್ಫೀ ಪ್ರಿಯರಿಗಾಗಿ ಫ್ರಂಟ್ ಕ್ಯಾಮರಾ ಮಾತ್ರ ಇಲ್ಲ.

4. ಸ್ನೇಕ್ ಮತ್ತೆ ಬಂದಿದೆ: ಮೂಲ ಫೋನಿನಲ್ಲಿದ್ದ ಜನಪ್ರಿಯ ನಾಲ್ಕು ಬಟನ್ ಗಳ ಸ್ನೇಕ್ ಗೇಮ್ ಈ ಫೋನಿನಲ್ಲೂ ಇದೆ. ಸರಳ 2ಡಿ ಗೇಮ್‌ಪ್ಲೇ ಇದ್ದರೆ ಈ ಗೇಮ್ ಗಾಗಿ ಸ್ಕ್ರೀನಿನಲ್ಲಿ ವಿವಿಧ ಬಣ್ಣಗಳ ಆರ್ಟ್ ಪ್ಲೇ ನೀಡಲಾಗಿದೆ.

5. ದೀರ್ಘಬಾಳಿಕೆಯ ಬ್ಯಾಟರಿ: ಈ ಫೋನಿನ ಬ್ಯಾಟರಿ ಬಾಳಿಕೆ ಅತ್ಯುತ್ತಮವಾಗಿದ್ದು ಕನಿಷ್ಠ ಒಂದು ತಿಂಗಳು ಸ್ಟ್ಯಾಂಡ್ ಬೈ ಸಾಮರ್ಥ್ಯ ಹೊಂದಿದ್ದು , 22 ಗಂಟೆ ಟಾಕ್ ಟೈಮ್ ಸಾಮರ್ಥ್ಯ ಕೂಡ ಅದಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News