ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಲು ತಾಲಿಬಾನ್ ಕರೆ !

Update: 2017-02-27 10:02 GMT

ಕಾಬೂಲ್,ಫೆ. 27: ಅಫ್ಘಾನಿಸ್ತಾನದ ಭೂಮಿಯನ್ನು ಸುಂದರಗೊಳಿಸಲಿಕ್ಕಾಗಿ ಮರಗಳನ್ನು ನೆಡಬೇಕೆಂದು ತಾಲಿಬಾನ್ ನಾಯಕ ಹಿಬ್ಬತ್ತುಲ್ಲ ಅಗುನ್ಸಾದ್ ಕರೆ ನೀಡಿದ್ದಾರೆ. ದೇಶದ ಸಾಮಾನ್ಯ ಜನರು ಮತ್ತು ಹೋರಾಟಗಾರರು ಫಲಗಳನ್ನು ನೀಡುವ ಮತ್ತು ನೀಡದ ಗಿಡಗಳನ್ನು ನೆಟ್ಟು ಭೂಮಿಯನ್ನು ಮತ್ತಷ್ಟು ಸುಂದರಗೊಳಿಸಬೇಕೆಂದು ಅವರು ಹೇಳಿದ್ದಾರೆ. ತಾಲಿಬಾನ್ ಅಧಿಕೃತ ವೆಬ್‌ಸೈಟ್ ಮೂಲಕ ರವಿವಾರ ಕರೆ ನೀಡಿದ ಆವರು ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿ, ಭೂಮಿಯ ಸೌಂದರೀಕರಣ ಮುಂತಾದುದಕ್ಕೆ ಗಿಡನೆಟ್ಟು ಬೆಳೆಸಿ ಮರವನ್ನಾಗಿ ಮಾಡುವುದರಲ್ಲಿ ದೊಡ್ಡ ಪಾತ್ರವಿದೆ ಎಂದು ತಾಲಿಬಾನ್ ನಾಯಕ ಹೇಳಿದ್ದಾರೆ.

ಕಳೆದವರ್ಷ ಮೇತಿಂಗಳಲ್ಲಿ ಅಗುನ್ಸಾದ್ ತಾಲಿಬಾನ್‌ನ ಹೊಸ ನಾಯಕನಾಗಿ ಹೊಣೆ ವಹಿಸಿಕೊಂಡಿದ್ದರು. ಒಬ್ಬ ತೀವ್ರವಾದಿ ಸಂಘಟನೆಯ ನಾಯಕ ಎನ್ನುವುದರ ಜೊತೆಗೆ ಓರ್ವ ಧಾರ್ಮಿಕ ನಾಯಕ ಎನ್ನುವ ಹೆಸರನ್ನು ಗಳಿಸಲು ಅವರಿಗೆ ಸಾಧ್ಯವಾಗಿದೆ.

ಕ್ರೂರಕೃತ್ಯಗಳ ಚರಿತ್ರೆಯಿರುವ ತಾಲಿಬಾನ್‌ನ ಕೆಟ್ಟ ಹೆಸರನ್ನು ದೂರಮಾಡಿ ಸಮಾಜದಲ್ಲಿ ಸಂಘಟನೆಗೆ ಜನಪ್ರಿಯತೆ ಸಿಗುವಂತೆ ಮಾಡುವ ಯತ್ನವನ್ನು ಅವರು ನಡೆಸುತ್ತಿದ್ದಾರೆ ಎಂದು ಅಲ್ಲಿನ ಸರಕಾರದ ಮೂಲಗಳು ಆರೋಪಿಸಿವೆ.

ಭಯಾನಕ ಅರಣ್ಯ ನಾಶವನ್ನು ಅಫ್ಘಾನ್ ಎದುರಿಸುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News