ವಿಐಪಿ ಭದ್ರತೆ ನಿರಾಕರಿಸಿದ ಶರ್ಮಿಳಾ

Update: 2017-02-27 15:12 GMT

ಇಂಫಾಲ,ಫೆ.27: ಚುನಾವಣಾ ಆಯೋಗದ ಆದೇಶದ ಮೇರೆಗೆ ಮಣಿಪುರ ಸರಕಾರವು ತನಗೆ ಒದಗಿಸಿರುವ ಭದ್ರತಾ ಬೆಂಗಾವಲನ್ನು, ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ನಿರಾಕರಿಸಿದ್ದಾರೆ. ತನಗೆ ಯಾರೊಂದಿಗೂ ಶತ್ರುತ್ವವಿಲ್ಲದಿರುವುದರಿಂದ ತಾನು ಯಾರಿಗೂ ಹೆದರುವ ಅಗತ್ಯವಿಲ್ಲವೆಂದು ಆಕೆ ಹೇಳಿದ್ದಾರೆ.

  ಸದಾ ಕಾಲವೂ ಜನರೊಂದಿಗಿರಲು ತಾನು ಬಯಸಿದ್ದು, ಸಶಸ್ತ್ರ ಪಡೆಗಳಿಂದ ಸುತ್ತುವರಿಯಲ್ಪಡುವಂತಹ ‘ವಿಐಪಿ ಸಂಸ್ಕೃತಿ’ಯನ್ನು ಒಪ್ಪುವುದಿಲ್ಲವೆಂದವರು ಹೇಳಿದ್ದಾರೆ.

   ಈ ಮಧ್ಯೆ, ಮಣಿಪುರ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ. ಸುರೇಶ್ ಬಾಬು ಹೇಳಿಕೆಯೊಂದನ್ನು ನೀಡಿ, ಶರ್ಮಿಳಾ ಅವರು ಹೆಚ್ಚಿನ ಸಂದರ್ಭಗಳಲ್ಲಿ ಏಕಾಂಗಿಯಾಗಿಯೇ ಪ್ರಯಾಣಿಸುತ್ತಿರುವುದರಿಂದ ಅವರಿಗೆ ಭದ್ರತೆಯನ್ನು ಭಾರತೀಯ ಚುನಾವಣಾ ಆಯೋಗವು ನಿರ್ದೇಶನವನ್ನು ನೀಡಿರುವುದಾಗಿ ತಿಳಿಸಿದ್ದಾರೆ.

 ಶರ್ಮಿಳಾ ಅವರ ಜನತಾ ಪುನರುತ್ಥಾನ ಹಾಗೂ ನ್ಯಾಯ ಮೈತ್ರಿಕೂಟ (ಪಿಆರ್‌ಜೆಎ) ದ ಸಂಚಾಲಕ ಎರೆಂಡ್ರೊ ಅವರು, ಪಕ್ಷಾಧ್ಯಕ್ಷೆಯ ಭದ್ರತೆಗಾಗಿ ಸರಕಾರವು ರಾಜ್ಯ ಸಶಸ್ತ್ರ ಪಡೆಯ ಆರು ಸಿಬ್ಬಂದಿಯನ್ನು ಒದಗಿಸಿದೆಯೆಂದು ತಿಳಿಸಿದ್ದಾರೆ.

    ಶರ್ಮಿಳಾ ನಾಯಕತ್ವದ ಪಿಆರ್‌ಜೆಎ ಪಕ್ಷವು ಮುಂಬರುವ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News