ಏರ್‌ಟೆಲ್‌ನಿಂದ ರೋಮಿಂಗ್ ಶುಲ್ಕ ರದ್ದು

Update: 2017-02-27 15:19 GMT

ಹೊಸದಿಲ್ಲಿ,ಫೆ.27: ರಿಲಾಯನ್ಸ್ ಜಿಯೋನಿಂದ ತೀವ್ರ ಸ್ಪರ್ಧೆ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ಮೊಬೈಲ್ ಸೇವಾದಾರ ಸಂಸ್ಥೆ ಭಾರ್ತಿ ಏರ್‌ಟೆಲ್, ಎಲ್ಲಾ ಆಗಮನ ಹಾಗೂ ನಿರ್ಗಮನ ಕರೆಗಳಿಗೆ ಹಾಗೂ ಎಸ್‌ಎಂಎಸ್‌ಗಳ ಮೇಲಿನ ರೋಮಿಂಗ್ ಶುಲ್ಕಗಳನ್ನು ರದ್ದುಪಡಿಸುವುದಾಗಿ ತಿಳಿಸಿದೆ.

 ಎಪ್ರಿಲ್ 1ರಿಂದ ದೇಶದೊಳಗಿನ ಎಲ್ಲಾ ರೋಮಿಂಗ್ ಶುಲ್ಕಗಳನ್ನು ರದ್ದುಪಡಿಸುವುದಾಗಿ ಅದು ತಿಳಿಸಿದೆ.

  ಅಂತಾರಾಷ್ಟ್ರೀಯ ಕರೆ ದರದಲ್ಲಿಯೂ ಏರ್‌ಟೆಲ್ ಶೇ.90ರಷ್ಟು ದರ ಕಡಿತ ಮಾಡಿದ್ದು, ನಿಮಿಷಕ್ಕೆ 3 ರೂ.ಗೆ ಇಳಿಸಿದೆ. ಅಂತಾರಾಷ್ಟ್ರೀಯ ಡೇಟಾ ದರದಲ್ಲೂ ಪ್ರತಿ ಎಂಬಿಗೆ 3 ರೂ.ಗೆ ಇಳಿಸಿದ್ದು, ಶೇ.99ರಷ್ಟು ಕಡಿತ ಮಾಡಿದೆ.

ಸಾಗರೋತ್ತರ ದೇಶಗಳಲ್ಲಿ ಪ್ರಯಾಣಿಸುವ ಏರ್‌ಟೆಲ್ ಬಳಕೆದಾರರ ದೈನಂದಿನ ರೋಮಿಂಗ್ ಶುಲ್ಕವನ್ನು, ರೋಮಿಂಗ್ ಪ್ಯಾಕೇಜ್ ಖರೀದಿಸದ ಗ್ರಾಹಕರಿಗೂ ಹೊಂದುವಂತೆ ಮಾಡಲಾಗುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News