ತುರ್ತು ಕುಡಿಯುವ ನೀರಿನ ಯೋಜನೆಗಳಿಗೆ ಸರಕಾರದಿಂದ 3.10 ಕೋಟಿ ರೂ. ಹೆಚ್ಚುವರಿ ಅನುದಾನ

Update: 2017-02-27 18:45 GMT

ಮಂಗಳೂರು, ಫೆ.27: ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜ ನೆಗಳಿಗಾಗಿ ಸರಕಾರವು ಟಾಸ್ಕ್ ಪೋರ್ಸ್ ನಡಿ ಹೆಚ್ಚುವರಿಯಾಗಿ 2.60 ಕೋ.ರೂ. ಹಾಗೂ ಜಿಪಂಗೆ ಪ್ರತ್ಯೇಕವಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ಜಿಪಂ ಸಿಇಒ ಎಂ.ಆರ್. ರವಿ ತಿಳಿಸಿದ್ದಾರೆ. 

ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಇಂದು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಕುಡಿಯುವ ನೀರಿನ ಸಮಸ್ಯೆಗಳ ಕುರಿತಾದ ಚರ್ಚೆಯ ವೇಳೆಗೆ ಅವರು ಈ ವಿವರ ನೀಡಿದರು.

ಫೆ.22ರಂದು ಸರಕಾರವು ಹೊರಡಿಸಿರುವ ಆದೇಶದ ಪ್ರಕಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಕ್ಕೆ ಅನುಗುಣವಾಗಿ ಬಂಟ್ವಾಳ, ಮಂಗಳೂರು ಉತ್ತರ, ಮಂಗಳೂರು, ಮೂಡುಬಿದಿರೆ, ಪುತ್ತೂರು ಕ್ಷೇತ್ರಗಳಿಗೆ ತಲಾ 40 ಲಕ್ಷ ರೂ.ನಂತೆ ಹಾಗೂ ಸುಳ್ಯ ಮತ್ತು ಬೆಳ್ತಂಗಡಿ ಕ್ಷೇತ್ರಗಳಿಗೆ ತಲಾ 30 ಲಕ್ಷ ರೂ.ನಂತೆ ಕುಡಿಯುವ ನೀರಿನ ತುರ್ತು ಯೋಜನೆಗಳಿಗೆ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಇದೇ ವೇಳೆ ಜಿಪಂಗೆ ಕುಡಿಯುವ ನೀರಿನ ತುರ್ತು ಪರಿಸ್ಥಿತಿ ನಿವಾರಿಸಲು 50 ಲಕ್ಷ ರೂ.ಹೆಚ್ಚುವರಿ ಅನುದಾನವನ್ನು ಒದಗಿಸಿದೆ.

ಈ ಹಣ ವನ್ನು ಜಿಪಂ ಅಧ್ಯಕ್ಷರು ವಿವೇಚನಾ ನಿಧಿಯಡಿ ಸರ್ವ ಸದಸ್ಯರ ಸಭೆಯಲ್ಲಿ ಘಟನೋತ್ತರ ಅನು ಮತಿ ಪಡೆದು ಅನು ದಾನವನ್ನು ವಿನಿಯೋಗಿಸಬ ಹುದಾಗಿದೆ ಎಂದರು. ಸದಸ್ಯರು ತಮ್ಮ ಕ್ಷೇತ್ರದ ತುರ್ತು ಹಾಗೂ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಗಮನಕ್ಕೆ ತಂದರೆ ಅನುದಾನ ವಿನಿಯೋಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ನೀರಿನ ಸಮಸ್ಯೆ ಕುರಿ ತಾದ ಚರ್ಚೆಯ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಪ್ರತಿ ಮನೆಯ ಲ್ಲಿಯೂ ನೀರಿಂಗಿಸುವ ಕುರಿತಂತೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವಂತೆ ಸದಸ್ಯೆ ಮಮತಾ ಗಟ್ಟಿ ಆಗ್ರಹಿಸಿದರು. ಕೊಳವೆ ಬಾವಿ ಕೊರೆಯುವುದಕ್ಕೆ ಪುತ್ತೂರು ತಾಲೂಕನ್ನು ಹೊರತುಪಡಿಸಿರುವ ಸರಕಾರದ ಆದೇಶದ ಕುರಿತಂತೆಯೂ ಕೆಲ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸದಸ್ಯರ ವ್ಯಾಪಕ ಚರ್ಚೆಯ ಬಳಿಕ ಪ್ರತಿಕ್ರಿಯಿ ಸಿದ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲೆ ಯನ್ನು ಬರಪೀಡಿತ ಜಿಲ್ಲೆಯಾಗಿ ಸರಕಾರ ಘೋಷಿಸಬೇಕೆಂದು ಆಗ್ರಹಿಸಿ ನಿರ್ಣಯ ಕೈಗೊ ಳ್ಳಬೇಕಾಗಿದೆ ಎಂದರು. ಮಾತ್ರವಲ್ಲದೆ, ಪುತ್ತೂರು ತಾಲೂಕು ಒಳಗೊಂಡಂತೆ ಜಿಲ್ಲೆಯ ಎಲ್ಲೆಡೆ ತುರ್ತು ಕುಡಿ ಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಾಣಕ್ಕೆ ಅವಕಾಶ ಒದಗಿಸುವುದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕಿಂಡಿ ಅಣೆಕಟ್ಟಿಗೆ ಪ್ರಥಮ ಆದ್ಯತೆ ನೀಡುವುದು ಹಾಗೂ ಪ್ರತಿ ಮನೆಯಲ್ಲೂ ಇಂಗುಗುಂಡಿ ಹಾಗೂ ಬಾವಿ ಅಗತ್ಯವಾಗಿ ನಿರ್ಮಿಸುವಂತೆ ಗ್ರಾಪಂ ನಿರ್ಣಯ ಕೈಗೊಳ್ಳುವಂತೆಯೂ ಸೂಚಿಸಿದರು. ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಸದ್ಯದ ಮಟ್ಟದಲ್ಲಿ ಘೋಷಿಸುವುದು ಸಮಂಜಸ ಅಲ್ಲ ಎಂದು ಹೇಳಿದ ಸಿಇಒ ಎಂ.ಆರ್. ರವಿ, ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ನಾವು ನೀಡಬೇಕಿದೆ. ಅದಕ್ಕೆ ಬದಲಾಗಿ ಭೂಮಿಯ ಮೇಲ್ಮೈಯಲ್ಲಿರುವ ನೀರನ್ನು ಬಳಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಾಗಿದೆ ಎಂದರು. ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಭೂಮಿಯ ಮೇಲ್ಮೈಯಲ್ಲಿರುವ ನೀರನ್ನು ಬಳಸುವ ಅನಿವಾರ್ಯತೆ ಇದೆ. ಟಾಸ್ಕ್ ಫೋರ್ಸ್‌ನಡಿ ತಾತ್ಕಾಲಿಕ ಪರಿಹಾರವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕೊನೆಯ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಸರ ಕಾರವು ಬರಪೀಡಿತ ಜಿಲ್ಲೆಗಳೆಂದು ಘೋಷಿ ಸಿರುವಲ್ಲಿ ಪ್ರತಿ ವಿಧಾನಸಭಾ ವಾರ್ಡ್‌ಗೆ 50 ಲಕ್ಷ ರೂ.ಗಳಂತೆ ಉಳಿದಂತೆ ತಲಾ 40 ಲಕ್ಷ ರೂ.ಗಳಂತೆ ಅನುದಾನವನ್ನು ಒದಗಿಸಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಲಾ 50 ಲಕ್ಷ ರೂ.ಗಳಂತೆ ಅನುದಾನ ಒದಗಿಸಲು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಉಳಿದಂತೆ ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಪುನರುಜ್ಜಿ ೀವನಕ್ಕಾಗಿ 15 ಕೋ.ರೂ. ಸರಕಾರ ಒದಗಿಸಿದೆ ಎಂದವರು ಹೇಳಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಶಾಹುಲ್ ಹಮೀದ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಿರುವ ಕ್ರೀಡಾ ಕಿಟ್‌ಗಳನ್ನು ಸಭೆಯ ಆರಂಭದಲ್ಲಿ ಸಾಂಕೇತಿಕವಾಗಿ ಒಂಬತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಬಂದ್ ಬಗ್ಗೆ ನಿರ್ಣಯಕ್ಕೆ ಅವಕಾಶವಿಲ್ಲ!

ಜಿಲ್ಲೆಯಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆ, ಪಕ್ಷದವರು ಬಂದ್‌ಗೆ ಕರೆ ನೀಡಿದರೂ ಅದಕ್ಕೆ ಅವಕಾಶ ನೀಡದಂತೆ ನಿರ್ಣಯವನ್ನು ಜಿಪಂ ಕೈಗೊಳ್ಳುವ ಅಗತ್ಯವಿದೆ. ಇತ್ತೀಚೆಗೆ ಬಂದ್‌ಗೆ ಕರೆ ನೀಡಲಾದ ಕಾರಣ ಆ ದಿನದಂದು ಜಿಲ್ಲೆಯ ಪ್ರಥಮ ಪಿಯುಸಿಯ 41 ಮಂದಿ ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಸದಸ್ಯೆ ಮಮತಾ ಗಟ್ಟಿ ಆಗ್ರಹಿಸಿದರು. ಆದರೆ ಈ ಬಗ್ಗೆ ವಿಪಕ್ಷ ಸದಸ್ಯರಾದ ತುಂಗಪ್ಪ ಬಂಗೇರ, ಸುಚರಿತ ಶೆಟ್ಟಿ, ಹರೀಶ್ ಕಂಜಿಪಿಲಿ ಮೊದಲಾದವರು ಆಕ್ಷೇಪಿಸಿದರು. ಈ ವಿಷಯ ಕೆಲಹೊತ್ತು ಸದಸ್ಯರ ನಡುವೆ ವಾಗ್ವಾದಕ್ಕೂ ಕಾರಣವಾಯಿತು. ಈ ಸಂದರ್ಭ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಬಂದ್ ಬಗ್ಗೆ ಜಿಪಂನಲ್ಲಿ ನಿರ್ಣಯ ಮಾಡಲು ಆಗುವುದಿಲ್ಲ. ಕಾರ್ಯಸೂಚಿ ಮಂಡಿಸಲು ಅವಕಾಶ ನೀಡಿ ಎಂದಾಗ, ವಿಪಕ್ಷ ಸದಸ್ಯರು ಅಸಮಾಧಾನಗೊಂಡರು. ಸುಪ್ರೀಂ ಕೋರ್ಟ್ ಕೂಡಾ ಬಂದ್‌ಗೆ ಆಸ್ಪದವಿಲ್ಲ ಎಂದು ಹೇಳಿರುವಾಗ ಜಿಪಂನಲ್ಲಿ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದ ಎಂದು ಸದಸ್ಯ ಎಂ.ಎಸ್. ಮುಹಮ್ಮದ್ ಪ್ರತಿಕ್ರಿಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಯವರೇ, ಮನ್‌ಕಿಬಾತ್‌ನಲ್ಲಿ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳು ಅದರಲ್ಲಿ ಉಲ್ಲಾಸದಿಂದ ಪಾಲ್ಗೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದ್ದು, ಸದಸ್ಯೆ ಮಮತಾ ಗಟ್ಟಿಯವರ ಕಾಳಜಿ ಭವಿಷ್ಯದಲ್ಲಿ ಅತ್ಯಂತ ಔಚಿತ್ಯವಾದುದು ಎಂದು ಅಧ್ಯಕ್ಷರು ಹಾಗೂ ಆಡಳಿತ ಪಕ್ಷದ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅದು ಫಲಕಾರಿ ಯಾಗದೆ ಬಂದ್ ಬಗ್ಗೆ ನಿರ್ಣಯ ಕೈಗೊಳ್ಳಲು ಜಿಪಂನಲ್ಲಿ ಸಾಧ್ಯವಿಲ್ಲ ಎಂದು ಹೇಳಿ ಅಧ್ಯಕ್ಷರು ಸಭೆಯನ್ನು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News