ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ, ಹಾಗಾಗಿ ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ: ಬಿಜೆಪಿ ಸಂಸದ ಕಟಿಯಾರ್
ಲಕ್ನೊ,ಫೆ. 28: ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಆದ್ದರಿಂದ ಉತ್ತರಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಕಟಿಯಾರ್ ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು. ಮುಸ್ಲಿಮರು ಬಿಜೆಪಿಯಿಂದ ದೂರವಿದ್ದಾರೆ. ಅವರು ಪಕ್ಷಕ್ಕೆ ಮತ ನೀಡುವುದಿಲ್ಲ. ಮತ್ತೆ ಯಾಕೆ ಅವರಿಗೆ ಟಿಕೆಟು ಕೊಡಬೇಕು.
ಒಂದು ದಿವಸ ಅವರು ಬಿಜೆಪಿಗೆ ಮತ ನೀಡಲು ಶುರುಮಾಡುತ್ತಾರೆ. ಅಂದು ಅವರಿಗೆ ಒಳ್ಳೆಯ ರೀತಿ ಬಿಜೆಪಿ ಟಿಕೆಟ್ ನೀಡಲಾಗುವುದು. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾರ್ಲಿಮೆಂಟ್‌ನಲ್ಲಿ ಕಾನೂನು ರೂಪಿಸಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆಎಂದು ಕಟಿಯಾರ್ ಹೇಳಿದ್ದಾರೆ.
ಈ ಹಿಂದೆ ಟಿವಿ ಸಂದರ್ಶನದಲ್ಲಿ ಕೇಂದ್ರ ಸಚಿವೆ ಉಮಾಭಾರತಿ ಮುಸ್ಲಿಂ ಸಮುದಾಯದಲ್ಲಿ ಯಾರಿಗೂ ಟಿಕೆಟ್ ನೀಡದ್ದು ಬಿಜೆಪಿಯಿಂದಾದ ತಪ್ಪು ಎಂದು ಹೇಳಿದ್ದರು. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ್ದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಟಿವಿಸಂದರ್ಶನದಲ್ಲಿ ಅವರ ಅಭಿಪ್ರಾಯವನ್ನು ಉಮಾಭಾರತಿ ಬೆಂಬಲಿಸಿದ್ದರು ಎಂದು ವರದಿತಿಳಿಸಿದೆ.