×
Ad

ನೋಟು ರದ್ದತಿಯ ಆಕ್ರೋಶದಿಂದ ಮೋದಿ ರ‍್ಯಾಲಿಯಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ ವಿದ್ಯಾರ್ಥಿ

Update: 2017-02-28 20:29 IST

ಹೊಸದಿಲ್ಲಿ, ಫೆ.28: ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಚುನಾವಣಾ ರ್ಯಾಲಿಯಲ್ಲಿ ಬಾಂಬ್ ಸ್ಪೋಟಿಸಲಿದೆ ಎಂದು ದಿಲ್ಲಿ ಪೊಲೀಸ್‌ಗೆ ಕರೆ ಮಾಡಿದ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೋರ್ವನನ್ನು ಬಂಧಿಸಲಾಗಿದೆ. ಈತನ ಹೆಸರು ದೀಪಕ್ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ಕ್ರಮದಿಂದ ಈತ ತೀವ್ರ ಆಕ್ರೋಶಗೊಂಡಿದ್ದ. ಅಲ್ಲದೆ ಕೇಂದ್ರದ ಬಿಜೆಪಿ ಸರಕಾರದ ಕಾರ್ಯನಿರ್ವಹಣೆ ಕುರಿತೂ ಈತ ಅಸಮಾಧಾನಗೊಂಡಿದ್ದ. ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಬೇಕು ಎಂದೀತ ಬಯಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಕರೆಯಿಂದ ಕೆಲಕ್ಷಣ ಗೊಂದಲ ಮೂಡಿದರೂ, ಪ್ರಧಾನಿ ಮೋದಿಯ ರ್ಯಾಲಿ ನಿಗದಿತ ರೀತಿಯಲ್ಲಿಯೇ ಸಾಗಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News