ಸಾಲ ವಂಚಕರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ :ಬ್ರಿಟನ್‌ನಲ್ಲಿ ಅರುಣ್ ಜೇಟ್ಲಿ
Update: 2017-02-28 21:02 IST
ಲಂಡನ್, ಫೆ. 28: ಸಾಲ ವಂಚಕರ ವಿಷಯದಲ್ಲಿ ಭಾರತ ಕಟ್ಟುನಿಟ್ಟಾಗಿ ವರ್ತಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆ ಮೂಲಕ ಭಾರತದಿಂದ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯರ ಗಡಿಪಾರು ವಿಷಯವನ್ನು ಬ್ರಿಟನ್‌ನ ಹಣಕಾಸು ಸಚಿವರೊಂದಿಗೆ ಪ್ರಸ್ರಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
‘‘ಖಂಡಿತವಾಗಿಯೂ, ಅವಕಾಶ ಸಿಕ್ಕಿದಾಗ ನಾನು ಅದನ್ನು (ಬ್ರಿಟನ್‌ನಲ್ಲಿ ನೆಲೆಸಿರುವ ಸಾಲ ವಂಚಕರ ವಿಷಯ) ಇಲ್ಲಿನ ಹಣಕಾಸು ಸಚಿವರ ಬಳಿ ಪ್ರಸ್ತಾಪಿಸುತ್ತೇನೆ’’ ಎಂದು ಈ ಕುರಿತ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಅರುಣ್ ಜೇಟ್ಲಿ ಬ್ರಿಟನ್ ಪ್ರವಾಸದಲ್ಲಿದ್ದಾರೆ.