ಫೆಲೆಸ್ತೀನಿನ ಫತಹ್ ಪಕ್ಷದ ಫೇಸ್‌ಬುಕ್‌ಗೆ ನಿರ್ಬಂಧ
ರಮಲ್ಲ,ಮಾ.1: ಫೇಸ್ ಬುಕ್ ಅಧಿಕಾರಿಗಳು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರ ಫತಹ್ ಪಕ್ಷದ ಅಧಿಕೃತ ಫೇಸ್‌ಬುಕ್ ಪುಟವನ್ನು ಬಂದ್ ಮಾಡಿದ್ದಾರೆ. ಮಾಜಿ ಫೆಲೆಸ್ತೀನ್ ಅಧ್ಯಕ್ಷ ಯಾಸರ್ ಅರಫಾತ್‌ರು ಕೋವಿ ಹಿಡಿದು ನಿಂತ ಚಿತ್ರವನ್ನು ಪೋಸ್ಟ್ ಮಾಡಿದ್ದು ಫೇಸ್‌ಬುಕ್ ಪುಟವನ್ನು ರದ್ದುಮಾಡಲು ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಫೇಸ್‌ಬುಕ್ ಅಧಿಕಾರಿಗಳು ಪಕ್ಷದ ಪುಟವನ್ನು ತೆಗೆದು ಹಾಕಿದ್ದು, ಫೇಸ್‌ಬುಕ್ ಮಾನದಂಡಗಳನ್ನು ಪಾಲಿಸಿಲ್ಲ ಎನ್ನುವ ಸಂದೇಶವನ್ನು ಕಳುಹಿಸಿದ್ದಾರೆಂದು ಫತಹ್ ಪಕ್ಷದ ಮಾಧ್ಯಮ ವಿಭಾಗದ ಮುನೀರ್ ಜಾಗೂಬ್ ತಿಳಿಸಿದ್ದಾರೆ.
1980ರಲ್ಲಿ ಬೈರೂತ್‌ನಲ್ಲಿ ಒಬ್ಬ ಇಸ್ರೇಲ್ ಸೈನಿಕನಿಂದ ಕಿತ್ತುಕೊಂಡಿದ್ದ ಕಲಾಶ್ನಿಕೋವ್ ಬಂದೂಕ್ ಯಾಸರ್ ಅರಫಾತ್ ಪರಿಶೀಲಿಸುವ ಹಳೆಯ ಚಿತ್ರವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಲಾಗಿತ್ತು.
ಫತಹ್ ನಾಯಕ ಮಹ್ಮೂದ್ ಆಲೂಲ್ ಕೂಡಾ ಯಾಸರ್ ಅರಫಾತ್ ಜೊತೆಗೆ ಆಚಿತ್ರದಲ್ಲಿದ್ದಾರೆ. ಫತಹ್‌ನ ಫೇಸ್‌ಬುಕ್‌ನ್ನು ಎಪ್ಪತ್ತು ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ ಎಂದು ಜಾಗೂಬ್ ಹೇಳಿದ್ದಾರೆ.
ಫೆಲೆಸ್ತೀನಿಯರು, ವಿಶೇಷವಾಗಿ ನಾಯಕರು ಸೋಶಿಯಲ್ ಮೀಡಿಯದ ಮೂಲಕ ದಾಳಿ ನಡೆಸಲು ಪ್ರೇರೇಪಿಸುತ್ತಿದ್ದಾರೆ ಎಂದು ಇಸ್ರೇಲ್ ಖಾಯಮ್ಮಾಗಿ ಆರೋಪಿಸುತ್ತಿದೆ. ಇದೇ ರೀತಿ ಫೇಸ್‌ಬುಕ್ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಫೆಲೆಸ್ತೀನ್ ನ್ಯೂಸ್ ವೆಬ್‌ಸೈಟ್‌ನ ಕೆಲವು ಪುಟಗಳನ್ನು ತೆರವುಗೊಳಿಸಿತ್ತು. ನಂತರ ಅದು ತಮ್ಮಿಂದಾದ ಪ್ರಮಾದವೆಂದು ಫೇಸ್‌ಬುಕ್ ಸ್ವಯಂ ತಪ್ಪೊಪ್ಪಿಕೊಂಡಿತ್ತು ಎಂದು ವರದಿ ತಿಳಿಸಿದೆ.