ಲೈಂಗಿಕ ಕಿರುಕುಳ: ಭಾರತೀಯ ಮೂಲದ ವ್ಯಕ್ತಿಯ ರಾಜೀನಾಮೆ ಕೇಳಿದ ಉಬರ್

Update: 2017-03-01 10:48 GMT

ನ್ಯೂಯಾರ್ಕ್, ಮಾ. 1: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾದ ವಿಷಯವನ್ನು ಮುಚ್ಚಿಟ್ಟ ಉನ್ನತ ಅಧಿಕಾರಿಯೊಬ್ಬರಿಂದ ಉಬರ್ ರಾಜೀನಾಮೆಯನ್ನು ಕೇಳಿದೆ. ಅಮಿತ್ ಸಿಂಘಾಲ್ ಎನ್ನುವ ಭಾರತೀಯ ಮೂಲದ ವ್ಯಕ್ತಿ ವಿರುದ್ಧ ಉಬರ್ ಕ್ರಮಕೈಗೊಂಡಿದೆ. 

ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಈತನ ವಿರುದ್ಧ ಸಹೋದ್ಯೋಗಿ ಮಹಿಳೆ ದೂರು ನೀಡಿದ್ದಳು. ಮಹಿಳಾ ಉದ್ಯೋಗಿಯ ದೂರಿನಲ್ಲಿ ತನಿಖೆ ನಡೆಸಿ ಅಮಿತ್ ತಪ್ಪಿತಸ್ಥ ಎಂದು ಕಂಡು ಬಂದದ್ದರಿಂದ ಆತನನ್ನು ಗೂಗಲ್ ಉದ್ಯೋಗದಿಂದ ವಜಾಗೊಳಿಸಿತ್ತು.

ಗೂಗಲ್‌ನಲ್ಲಿ 15ವರ್ಷ ಕೆಲಸ ಮಾಡಿದ್ದ ಅಮಿತ್ ಸಿಂಘಾಲ್ ಈವರ್ಷ ಜನವರಿಯಲ್ಲಿ ಉಬರ್‌ಗೆ ಸೇರಿದ್ದರು.ಗೂಗಲ್‌ನಿಂದ ಹೊರಹಾಕಿದ ವಿಷಯವನ್ನಾಗಲಿ, ಲೈಂಗಿಕ ಕಿರುಕುಳದ ಕುರಿತು ಆರೋಪ ಇರುವುದನ್ನು ಈತ ಉಬರ್‌ಗೆ ತಿಳಿಸಿರಲಿಲ್ಲ.

ಅಮಿತ್ ಸಿಂಘಾಲ್ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾನೆ. ಕಳೆದ 20ವರ್ಷಗಳ ಸುದೀರ್ಘ ಜೀವನದಲ್ಲಿ ಇಂಹತ ಘಟನೆಗಳೇ ಆಗಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ಸಿಂಘಾಲ್‌ಕುರಿತ ಗೂಗಲ್ ವರದಿ ಬಹಿರಂಗವಾದ ಕೂಡಲೇ ಉಬರ್ ಈತನಿಂದ ರಾಜೀನಾಮೆಯನ್ನು ಕೇಳಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News