ಪಿಣರಾಯಿ ಸರಕಾರದಿಂದ ಕೇರಳದ ಸರ್ವನಾಶ: ನಟಿ ಖುಷ್ಬು
Update: 2017-03-01 17:31 IST
ಕಲ್ಲಿಕೋಟೆ,ಮಾ.1: ಪಿಣರಾಯಿ ವಿಜಯನ್ ಸರಕಾರ ಒಂಬತ್ತು ತಿಂಗಳ ಅವಧಿಯಲ್ಲಿ ಕೇರಳವನ್ನು ನಾಶಮಾಡಿದೆ ಎಂದು ನಟಿ ಮತ್ತು ಎಐಸಿಸಿ ವಕ್ತಾರೆ ಖುಷ್ಬು ಹೇಳಿದ್ದಾರೆ.
ಮಧ್ಯರಾತ್ರಿ ಕೂಡಾ ರಸ್ತೆಯಲ್ಲಿ ಇಳಿದು ಹೋಗಲು ಸಾಧ್ಯವಾಗುವ ಸ್ಥಿತಿಯನ್ನು ಸ್ವಾತಂತ್ರ್ಯ ಎಂದು ಕರೆಯಲಾಗುತ್ತದೆ. ಆದರೆ ಪಿಣರಾಯಿ ಸರಕಾರದ ಆಡಳಿತದಲ್ಲಿ ಮಟಮಧ್ಯಾಹ್ನ ಕೂಡಾ ಹೊರಗಿಳಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಜನಸಾಮಾನ್ಯರಿಗೆ ರಕ್ಷಣೆ ನೀಡಲು ಪೊಲೀಸರು ಪ್ರಯತ್ನಿಸುವುದಿಲ್ಲ. ಆದ್ದರಿಂದ ಅವರು ಸ್ವಯಂ ಪ್ರತಿರೋಧಿಸಲಷ್ಟೇ ಸಾಧ್ಯವಿದೆ.
ಹೆಣ್ಣು ಮದುವೆಯಾಗಿ ಹೋಗುವಾಗ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕೆಂದು ಮನೆಯವರು ಕೂಡಾ ಹೇಳುತ್ತಾರೆ. ಆದರೆ ಇದು ಮಾನಸಿಕ,ಶಾರೀರಿಕ ದೌರ್ಜನ್ಯದ ವಿರುದ್ಧ ಸಾಧ್ಯವಿಲ್ಲ ಎಂದು ಮಹಿಳೆಯರು ಹೇಳಲು ಕಲಿಯಬೇಕೆಂದು ಎಂದ ಖುಷ್ಬು ಸಮಾಜ ಕೂಡಾ ತಮ್ಮ ಮನಸ್ಸನ್ನು ಈ ರೀತಿ ಬದಲಾಯಿಸಿಕೊಳ್ಳಲು ಶ್ರಮಿಸಬೇಕೆಂದು ಅವರು ಹೇಳಿದ್ದಾರೆಂದು ಕೇರಳದ ವೆಬ್‌ಸೈಟೊಂದು ವರದಿ ಮಾಡಿದೆ.