ತೋಡಿಗೆ ತ್ಯಾಜ್ಯ ನೀರು: ನಗರಸಭೆ ಎಚ್ಚರಿಕೆ

Update: 2017-03-01 18:34 GMT

ಉಡುಪಿ, ಮಾ.1: ತೆಂಕುಪೇಟೆ ವಾರ್ಡಿನ ಅಮ್ಮುಂಜೆ ಪೆಟ್ರೋಲ್ ಬಂಕ್ ಸಮೀಪದ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿರುವ ಮನೆ ಹಾಗೂ ಮಳಿಗೆಗಳ ವಿರುದ್ಧ ಉಡುಪಿ ನಗರಸಭೆ ಇಂದು ಕ್ರಮ ಕೈಗೊಂಡಿದ್ದು, ಸುಮಾರು 15ಕ್ಕೂ ಅಕ ಪೈಪ್‌ಲೈನ್‌ಗೆ ಎಂಡ್‌ಕ್ಯಾಪ್ ಹಾಕಲಾಗಿದೆ.

ನೀರು ಹರಿಯುವ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿರುವುದರಿಂದ ಇಡೀ ಪರಿಸರ ವಾಸನೆ ಬರುತ್ತಿದ್ದು, ಇದರ ವಿರುದ್ಧ ಕೆಲ ದಿನಗಳ ಹಿಂದೆ ಸ್ಥಳೀಯರು ಪ್ರತಿಭಟನೆ ನಡೆಸಿ ನಗರಸಭೆ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಪೌರಾಯುಕ್ತರು ಪರಿಶೀಲಿಸಿ ಕ್ರಮದ ಭರವಸೆ ನೀಡಿದ್ದರು. ಅದರಂತೆ ಆ ಪರಿಸರದ ಮನೆ ಹಾಗೂ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಮೂರು ನೋಟಿಸ್‌ಗೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಬುಧವಾರ ಆ ಮನೆ ಹಾಗೂ ಮಳಿಗೆಗಳಿಂದ ತೋಡಿಗೆ ಮಲೀನ ನೀರು ಬರುವ ಪೈಪಿಗೆ ಎಂಡ್‌ಕ್ಯಾಪ್ ಅಳವಡಿಸಲಾಯಿತು. ತಮ್ಮ ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸದೆ ಅವರು ಈ ಎಂಡ್‌ಕ್ಯಾಪ್ ತೆಗೆಯುವಂತಿಲ್ಲ. ಅದಕ್ಕೂ ಮುನ್ನ ತೆಗೆದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News