×
Ad

ಉತ್ತರಾ ಖಂಡದಲ್ಲಿ ಅಪ್ರಾಪ್ತ ಮುಸ್ಲಿಮ್ ಬಾಲಕನ ಲಾಕಪ್ ಡೆತ್: ಪರಿಸ್ಥಿತಿ ಉದ್ವಿಗ್ನ

Update: 2017-03-02 19:34 IST

ಉಧಮ್ ಸಿಂಗ್ ನಗರ: ಇಲ್ಲಿನ ಕಾಶಿಪುರ ಪ್ರದೇಶದಲ್ಲಿ ಹುಡುಗಿಯ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿದ್ದ ಹದಿನಾರುವರ್ಷದ ಅಪ್ರಾಪ್ತ ವಯಸ್ಸಿನ ಬಾಲಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಹೊಡೆದು ಹುಡುಗನನ್ನು ಕೊಂದು ಹಾಕಿದ್ದಾರೆಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ನೇಣು ಬಿಗಿದು ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದ್ದಾರೆ.ಹುಡುಗಿಯೊಬ್ಬಳ ಅಪಹರಣ ಪ್ರಕರಣದಲ್ಲಿ 16ವರ್ಷದ ಝಿಯಾವುದ್ದೀನ್ ಎನ್ನುವ ಬಾಲಕನನ್ನು ಟೊರಾತಾಲ್ ಪೊಲೀಸರು ಫೆಬ್ರವರಿ 26 ರಂದು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಕಳೆದ ದಿನ ತಡ ರಾತ್ರಿ ಝಿಯಾವುದ್ದೀನ್ ಪೊಲೀಸ್ ಠಾಣೆಯಲ್ಲಿ ನೇಣುಬಿಗಿದುಕೊಂಡಿದ್ದಾನೆ ಪೊಲೀಸರು ಎಂದು ಹೇಳಿಕೆ ನೀಡಿದ್ದಾರೆ. ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಹುಡುಗ ಸತ್ತಿದ್ದಾನೆಂದು ಘೋಷಿಸಿದ್ದರು. ನಂತರ ಪೊಲೀಸರು ಆಸ್ಪತ್ರೆಯಲ್ಲೇ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಝಿಯಾವುದ್ದೀನ್‌ನ ಸಾವಿನ ಸುದ್ದಿ ತಿಳಿದು ಕುಟುಂಬದವರು ಆಸ್ಪತ್ರೆಗೆ ಧಾವಿಸಿದ್ದಾರೆ. ಪೊಲೀಸರು ಹುಡುಗನನ್ನು ಹೊಡೆದು ಕೊಂದಿದ್ದಾರೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಶೋಕತಪ್ತ ಜನರು ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ. ಝಿಯಾವುದ್ದೀನ್‌ನ ತಂದೆ ಮುಹಮ್ಮದ್ ಯಾಮಿನ್ ಎಸ್ಸೈ, ಹೆಡ್‌ಕಾನ್ಸ್‌ ಸ್ಟೇಬಲ್, ಐವರು ಅಪರಿಚಿತ ಪೊಲೀಸರು ಮತ್ತು ಇತರ ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News