×
Ad

ಸಬ್‌ಮೆರಿನ್‌ನಿಂದ ಕ್ಷಿಪಣಿ ಉಡ್ಡಯನ: ಪರೀಕ್ಷೆ ಯಶಸ್ವಿ

Update: 2017-03-02 23:52 IST

ಹೊಸದಿಲ್ಲಿ, ಮಾ.2: ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ಕಲ್ವಾರಿ ಸಬ್‌ಮೆರಿನ್‌ನಿಂದ ನೌಕೆ ನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ.

ಈ ಕ್ಷಿಪಣಿಯ ಯಶಸ್ಸು ಭಾರತೀಯ ನೌಕಾಪಡೆ ಜಲತಳದಲ್ಲಿ ಪರಿಣಾಮಕಾರಿಯಾಗಿ ಹೋರಾಡುವ ಶಕ್ತಿಯನ್ನು ವರ್ಧಿಸಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ. ಅರೇಬಿಯನ್ ಸಮುದ್ರದಲ್ಲಿ ಉಡಾಯಿಸಲಾದ ಈ ಕ್ಷಿಪಣಿ ನಿರ್ದಿಷ್ಟ ಗುರಿಯನ್ನು ನಿಖರವಾಗಿ ತಲುಪಿದೆ. ಮುಂಬೈಯ ಮಝಗಾಂವ್ ಡಾಕ್‌ನಲ್ಲಿ ‘ಪ್ರೊಜೆಕ್ಟ್ 75’ ನಾಮಧೇಯದಡಿ ಈ ಆರು ಸಬ್‌ಮೆರಿನ್ ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಡೀಸೆಲ್ ಮತ್ತು ವಿದ್ಯುತ್, ಎರಡರಿಂದಲೂ ಚಲಿಸಬಲ್ಲ, ದಾಳಿ ನಡೆಸುವ ಸಾಮರ್ಥ್ಯದ ಈ ಸಬ್‌ಮೆರಿನ್‌ಗಳು ನೌಕೆ ನಾಶಕ ಕ್ಷಿಪಣಿಗಳನ್ನು ಹೊಂದಿರುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News