×
Ad

ಕೇರಳ: ಪತ್ರಕರ್ತರ ಪಿಂಚಣಿ 2 ಸಾವಿರ ರೂ. ಏರಿಕೆ

Update: 2017-03-04 00:09 IST

ತಿರುವನಂತಪುರಂ, ಮಾ.3: ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐ-ಎಂ ನೇತೃತ್ವದ ಎಲ್‌ಡಿಎಫ್ ಸರಕಾರವು ಪತ್ರಕರ್ತರ ಪಿಂಚಣಿ ಹಣದಲ್ಲಿ 2 ಸಾವಿರ ರೂ. ಹೆಚ್ಚಳ ಮಾಡಿದ್ದು, ಇದ ರೊಂದಿಗೆ ಮಾಸಿಕ ಪಿಂಚಣಿ 10 ಸಾವಿರ ರೂ.ಗೆ ತಲುಪಿದೆ.

ರಾಜ್ಯದ ವಿತ್ತಸಚಿವ ಟಿ.ಎಂ.ಥೋಮಸ್ ಇಸಾಕ್ ಮಂಡಿಸಿದ 2017-18ರ ಸಾಲಿನ ಬಜೆಟ್‌ನಲ್ಲಿ, ಚಂದಾ ಪಿಂಚಣಿ ಯೋಜ ನೆಯ ಸದಸ್ಯರಾಗಿರುವ ಪತ್ರಕರ್ತರ ಪಿಂಚಣಿಯನ್ನು 2 ಸಾವಿರ ರೂ. ಹೆಚ್ಚಿಸಲಾಗಿದೆ. ಅಲ್ಲದೆ 1 ಸಾವಿರ ಕಿರಿಯ ಚಿತ್ರ ಕಲಾ ವಿದರಿಗೆ ತಲಾ ಮಾಸಿಕ 10 ಸಾವಿರ ರೂ. ಡೈಮಂಡ್ ಜ್ಯುಬಿಲಿ ಫೆಲೋಶಿಪ್ ನೀಡಲಾಗುವುದು ಎಂದು ವಿತ್ತಸಚಿವರು ಘೋಷಿಸಿದ್ದಾರೆ. ಈ ಕಲಾವಿದರು ಶಾಲೆಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ ತರಬೇತಿ ನೀಡುವುದು ಸೇರಿದಂತೆ ಸ್ವ ಇಚ್ಛೆಯಿಂದ ಕಾರ್ಯ ನಿರ್ವಹಿಸಬೇಕು ಎಂಬ ಷರತ್ತಿನ ಮೇಲೆ ಈ ಫೆಲೋಶಿಪ್ ನೀಡಲಾಗುತ್ತದೆ. ಇದಕ್ಕಾಗಿ 135 ಕೋಟಿ ರೂ. ನಿಧಿಯನ್ನು ತೆಗೆದಿರಿಸಲಾಗಿದೆ. ಗ್ರಾಮೀಣ ಕಲಾಕಾರರು ಮತ್ತು ಕುಶಲಕರ್ಮಿಗಳು ಒಳಗೊಂಡಿರುವ ಕಲಾ ಕೇಂದ್ರಗಳ ಸ್ಥಾಪನೆಗೆ 1 ಕೋಟಿ ರೂ. ನಿಧಿ ಮೀಸಲಿರಿಸಲಾಗಿದೆ ಎಂದವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News