ಪಂಚಾಯತ್‌ನಿಂದ ತೆರವು ಕಾರ್ಯಾಚರಣೆ

Update: 2017-03-03 18:43 GMT

ಸರಕಾರಿ ಸ್ಥಳದಲ್ಲಿ ತಲೆಎತ್ತಿದ್ದ ಅಕ್ರಮ ಕಟ್ಟಡ

ಪುತ್ತೂರು, ಮಾ.3: ಪುತ್ತೂರು ತಾಲೂಕಿನ ಕಬಕ ಗ್ರಾಪಂ ವ್ಯಾಪ್ತಿಯ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿ ಸರಕಾರಿ ಸ್ಥಳವನ್ನು ಅತಿಕ್ರಮಿಸಿಕೊಂಡು ತಲೆಎತ್ತಿದ್ದ ಅಕ್ರಮ ಕಟ್ಟಡವೊಂದನ್ನು ಕಬಕ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಕಾರಿಗಳು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.

ಕಬಕದ ವಿದ್ಯಾಪುರ ಅಂಗನವಾಡಿ ಬಳಿ ಸರಕಾರಿ ಸ್ಥಳವನ್ನು ಅತಿಕ್ರಮಿಸಿಕೊಂಡು ಸ್ಥಳೀಯ ವ್ಯಕ್ತಿಯೊಬ್ಬರು ಶೀಟ್ ಅಳವಡಿಸಿದ ಕಟ್ಟಡ ನಿರ್ಮಿಸಿದ್ದು, ಇದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಕಬಕ ಗ್ರಾಪಂಗೆ ದೂರು ಸಲ್ಲಿಸಿದ್ದರು.

ಪಂಚಾಯತ್ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದ ವೇಳೆ ಅದು ಸರಕಾರಿ ಜಾಗವೆಂಬುವುದು ದೃಢಪಟ್ಟಿದೆ. ಗ್ರಾಪಂ ಅಧ್ಯಕ್ಷೆ ಪ್ರೀತಾ, ಸದಸ್ಯರಾದ ವಿನಯ್, ಮಾಲತಿ, ಭಾನುಮತಿ, ಗ್ರಾಮಕರಣಿಕ ಲಕ್ಷ್ಮೀಪತಿ, ಮನೋಹರ್ ಪುತ್ತೂರು ನಗರ ಪೊಲೀಸರ ಸಹಕಾರದೊಂದಿಗೆ ಶುಕ್ರವಾರ ಸ್ಥಳಕ್ಕೆ ತೆರಳಿ ಅಕ್ರಮ ಕಟ್ಟಡದ ತೆರವು ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News