×
Ad

ಸಾಕ್ಷಿ ಮಹಾರಾಜ್‌ಗೆ ಕೊಲೆ ಬೆದರಿಕೆ

Update: 2017-03-04 12:18 IST

ಉನ್ನಾವ್,ಮಾ.4: ವಿವಾದಾತ್ಮಕ ಹೇಳಿಕೆ ನೀಡಿ ಸದಾಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿಮಹಾರಾಜ್‌ಗೆ ಬಾಂಬ್‌ಸ್ಫೋಟಿಸಿ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಅಜ್ಞಾತ ನಂಬರ್‌ನಿಂದ ಫೋನ್ ಮಾಡಿದ ವ್ಯಕ್ತಿ ಸಾಕ್ಷಿಯನ್ನು ವಾಚಾಮಗೋಚರ ಬೈದಿದ್ದಾನೆ.

ಚುನಾವಣೆ ಮುಗಿಯಲ್ಲಿ ನಿಮ್ಮನ್ನು ಬಾಂಬಿಟ್ಟು ಕೊಲ್ಲಲಾಗುವುದು ಎಂದಿದ್ದಾನೆ. ಈ ಕುರಿತು ಅವರು ಉನ್ನಾವ್ ಕೋತ್‌ವಾಲಿ ಠಾಣೆಗೆ ದೂರು ನೀಡಿದ್ದಾರೆ.

ಜನಸತ್ತಾದ ವರದಿ ಪ್ರಕಾರ, ತನ್ನ ಆಪ್ತ ಕಾರ್ಯದರ್ಶಿ ಅಶೋಕ್‌ರ ಬಳಿಯಿದ್ದ ತನ್ನ ಮೊಬೈಲ್‌ಗೆ ನಿನ್ನೆ ರಾತ್ರಿ ಸುಮಾರು 9:11ರ ವೇಳೆಗೆ 240940693 ನಂಬರ್‌ನಿಂದ ಕರೆ ಬಂದಿತ್ತು.

ಕರೆ ಮಾಡಿದ ವ್ಯಕ್ತಿ ಮಾರ್ಚ್ 11 ರನಂತರ ನಿಮ್ಮನ್ನು ಬಾಂಬಿಟ್ಟು ಕೊಲ್ಲಲಾಗುವುದು ಎಂದು ಹೇಳಿದ್ದಾನೆಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಕೋತ್‌ವಾಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News